ಕುರುಡು ಕಾಂಚಾಣಕ್ಕೆ ಬ್ರೇಕ್ ಹಾಕಲು ಚುನಾವಣಾ ಆಯೋಗ ಅಲರ್ಟ್
ಮೈಸೂರು(ಹುಣಸೂರು): ಸಾರ್ವತ್ರಿಕ ಚುನಾವಣೆಗಳಿಂತ ಉಪಚುನಾವಣೆ ನಡೆಸುವುದೇ ಜಿಲ್ಲಾಡಳಿತಕ್ಕೆ ಹಾಗೂ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಒಂದೇ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ಕೇಂದ್ರಿಕೃತವಾಗಿರುವುದರಿಂದ ರಾಜಕೀಯ ಪಕ್ಷಗಳು ಜಿದ್ದಿಗೆ ಬಿದ್ದು ಆಮಿಷಗಳ ಮೂಲಕ ಗೆಲ್ಲಲು ನಾನಾ ತಂತ್ರ ರೂಪಿಸುತ್ತಿವೆ. ಈವರೆಗೆ 6.35 ಲಕ್ಷ ರೂ.ನಗದು, 1.37 ಕೋಟಿ ರೂ.ಮೌಲ್ಯದ ಮದ್ಯ, 97.90 ರೂ.ಮೌಲ್ಯದ ಪಾಂಪ್ಲೇಟ್, ಪಾತ್ರೆ, ಸೀರೆ, ದ್ವಿಚಕ್ರ ವಾಹನ, 4 ಟ್ಯಾಂಕಸ್೯ ಗಳನ್ನು ವಶಪಡಿಸಿಕೊಂಡು, ಒಟ್ಟು 40 ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.