'ಡ್ರಗ್ಸ್ ಪ್ರಕರಣದ ತನಿಖೆ' ಫಾಸ್ಟ್ ಆಗಬೇಕು: ಸತೀಶ್ ಜಾರಕಿಹೊಳಿ ಒತ್ತಾಯ
ಡ್ರಗ್ಸ್ ಪ್ರಕರಣದ ತನಿಖೆ ಫಾಸ್ಟ್ ಆಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಬೇಗ ಬೇಗ ಮಾಡಬೇಕಿತ್ತು. ಇಡೀ ರಾಜ್ಯಾದ್ಯಂತ ತನಿಖೆ ಆಗಬೇಕು. ಕೆಲವು ಕಡೆ ಒಳ್ಳೆಯ ರೀತಿಯಿಂದ ತನಿಖೆ ನಡೆದಿದೆ. ಇನ್ನೂ ತಡವಾಗಿಲ್ಲ ಆದರೂ ಕಠಿಣ ಕ್ರಮ ಆಗಬೇಕು ಎಂದರು.