ಹಾಸನದಲ್ಲಿ ಜಾನಪದ ಜಾತ್ರೆ.. ನಾಡಿನ ಕಲೆಗಳ ವೈಭವ ಅನಾವರಣ.. - Folk artist groups
ಹಾಸನ: ಸೂರ್ಯಾಸ್ತದ ಸಮಯ. ಕಿವಿಗಡಚಿಕ್ಕುವ ಡೊಳ್ಳು ಕುಣಿತ, ನಗಾರಿ, ತಮಟೆ ವಾದನ ಸದ್ದು ರಂಗೇರಿಸಿದವು. ವೀರಾಗಸೆ,ಕಂಸಾಳೆ,ಸೋಮನ ಕುಣಿತ ಪ್ರೇಕ್ಷಕರಲ್ಲಿ ಮಿಂಚಿನ ಸಂಚಾರ ಉಂಟು ಮಾಡಿದವು. ಡೊಳ್ಳಿನ ಸದ್ದು ಕೊನೆಗೊಳ್ಳುತ್ತಿದ್ದಂತೆ ಮಂಜು ಮತ್ತು ತಂಡದವರ ನಗಾರಿ ನಾದ ಮುಗಿಲು ಮುಟ್ಟಿತು. ಕಂಸಾಳೆ ಪಟ್ಟುಗಳು ಮನಸೂರೆಗೊಂಡವು. ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಗುರುವಾರ ಆಯೋಜಿಸಿದ್ದ ಜಾನಪದ ಜಾತ್ರೆಯಲ್ಲಿ ಕಂಡು ಬಂದ ದೃಶ್ಯವಿದು.