ಮೈಸೂರು: ಚೇತರಿಕೆ ಹಾದಿಯತ್ತ ಹೋಟೆಲ್ ಉದ್ಯಮ - ಮೈಸೂರು ಜಿಲ್ಲೆ ಸುದ್ದಿ
ಮೈಸೂರು: ಕೋವಿಡ್ನಿಂದ ಸಂಪೂರ್ಣ ನೆಲಕಚ್ಚಿದ್ದ ಹೋಟೆಲ್ ಉದ್ಯಮ ಚೇತರಿಕೆ ಹಾದಿಯತ್ತ ಸಾಗಿದೆ. ನಗರದಲ್ಲಿ 1,500ಕ್ಕೂ ಹೆಚ್ಚು ಸಣ್ಣ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿದ್ದು, ಅಧಿಕ ಪ್ರಮಾಣದಲ್ಲೇ ಜನರು ಹೋಟೆಲ್ಗಳತ್ತ ಮುಖ ಮಾಡುತ್ತಿದ್ದಾರೆ. ಜೊತೆಗೆ ರಾಜ್ಯ ಮತ್ತು ಹೊರ ರಾಜ್ಯಗಳ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಪ್ರತಿ ವರ್ಷದಂತೆ ಇರುತ್ತಿದ್ದ ವ್ಯಾಪಾರ ವಹಿವಾಟು ಈ ಬಾರಿ ಇಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಹೇಳಿದರು.