ಕಲ್ಪತರು ನಾಡಲ್ಲಿ ಕೊರೊನಾ ಕಂಟಕ: ಎಲ್ಲೆಡೆ ನೀರವ ಮೌನ
ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿ ಹಿನ್ನೆಲೆ ಜನಸಂಚಾರ ವಿರಳವಾಗಿತ್ತು. ಕೊರೊನಾ ಹರಡುವಿಕೆ ತಡೆಗಟ್ಟಲು ಈಗಾಗಲೇ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದ್ದು, ಮಾರ್ಚ್ 31ರವರೆಗೆ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿದೆ. ಇನ್ನೊಂದೆಡೆ ವೈದ್ಯಕೀಯ ಸಿಬ್ಬಂದಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ಸಿದ್ದಗಂಗಾಮಠದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಹಿಡಿದು ಸಾರ್ವಜನಿಕರನ್ನು ಪರೀಕ್ಷೆ ಮಾಡಲಾಯಿತು. ಮೋದಿ ನೀಡಿದ ಜನತಾ ಕರ್ಫ್ಯೂಗೆ ಬೆಂಬಲ ನೀಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.