ಕೊರೊನಾ ವೈರಸ್ ಎಫೆಕ್ಟ್: ರಾಣೆಬೆನ್ನೂರು ಸಂಪೂರ್ಣ ಸ್ತಬ್ಧ - ranebennuru lock down
🎬 Watch Now: Feature Video
ರಾಣೆಬೆನ್ನೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನಗರ ಸಂಪೂರ್ಣ ಲಾಕ್ ಡೌನ್ ಆಗಿದೆ. ಬೆಳಗ್ಗೆಯಿಂದಲೂ ಪೊಲೀಸರು ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರಿಗೆ ಅನಾವಶ್ಯಕ ಹೊರ ಬರದಂತೆ ಎಚ್ಚರಿಕೆ ನೀಡಿದರು. ಇನ್ನು ಸಂಪೂರ್ಣ ಲಾಕ್ ಡೌನ್ ಮಾಡಿರುವ ಹಿನ್ನೆಲೆ ನಗರ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ಎಂಜಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಬ್ಯಾರಿಕೆಡ್ ಹಾಕಲಾಗಿತ್ತು. ಪೊಲೀಸರು ಸಿದ್ದೇಶ್ವರ ನಗರ, ಕೋರ್ಟ್ ವೃತ್ತ, ಹಲಗೇರಿ ಕ್ರಾಸ್ ಬಳಿ ವಾಹನಗಳನ್ನು ತಪಾಸಣೆ ಮಾಡಿ ಸವಾರರಿಗೆ ಮಾಸ್ಕ್ ಹಾಕಿಕೊಳ್ಳಲು ಮನವಿ ಮಾಡುತ್ತಿದ್ದರು.