'ಸಮಾನ ಕೆಲಸಕ್ಕೆ ಸಮಾನ ವೇತನ': ಬಿಬಿಎಂಪಿ ವಿರುದ್ದ ಸಿಡಿದೆದ್ದ ಪೌರ ಕಾರ್ಮಿಕರು... - ಪೌರ ಕಾರ್ಮಿಕರ ಪ್ರತಿಭಟನೆ
ಬೆಂಗಳೂರು: ಬಿಬಿಎಂಪಿ ವಿರುದ್ಧ ಮತ್ತೆ ಪೌರ ಕಾರ್ಮಿಕರು ಪ್ರತಿಭಟನೆಗಿಳಿದಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಕನಿಷ್ಠ ವೇತನ 30,000 ರೂ.ಗೆ ಹೆಚ್ಚಳ ಮಾಡಬೇಕು, ಎಲ್ಲ ಪೌರಕಾರ್ಮಿಕರನ್ನು ಕೂಡಲೇ ಖಾಯಂಗೊಳಿಸಬೇಕು ಎಂದು ಪೌರಕಾರ್ಮಿಕರ ಸಂಘದಿಂದ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು. ಪೌರಕಾರ್ಮಿಕರಿಗೆ ಮೂಲ ಸೌಕರ್ಯಗಳಾದ ಪೊರಕೆ, ಮಾಸ್ಕ್, ಗ್ಲೌಸ್ಗಳನ್ನೇ ಕೊಡುತ್ತಿಲ್ಲ. ಹಬ್ಬದ ರಜೆ, ವಾರದ ರಜೆಗಳನ್ನು ಸರಿಯಾಗಿ ನೀಡಬೇಕು. ಇಎಸ್ಐ, ಪಿಎಫ್ ನೀಡಬೇಕು ಎಂದು ಪೌರ ಕಾರ್ಮಿಕರು ಒತ್ತಾಯಿಸಿದರು.