ವಿದ್ಯುತ್ ಕಂಬ ಮಧ್ಯೆ ಬಿಟ್ಟು ರಸ್ತೆ ನಿರ್ಮಿಸಿದ್ರಾ ಗುತ್ತಿಗೆದಾರರು...! - ಚಿಕ್ಕೋಡಿ
ರಸ್ತೆಗಳು ದೇಶದ ನರನಾಡಿಗಳಿದ್ದಂತೆ, ಅವುಗಳು ಸರಿಯಾಗಿದ್ದರೆ ಮಾತ್ರ ಜನಜೀವನ ಸರಾಗವಾಗಿ ನಡೆಯುತ್ತದೆ. ರಾಜ್ಯದ ಹಲವೆಡೆ ಗ್ರಾಮಗಳಲ್ಲಿ ತೆರಳುವುದಕ್ಕೆ ಸರಿಯಾದ ರಸ್ತೆಗಳೇ ಇಲ್ಲ ಅಂತ ಸಾರ್ವಜನಿಕರು ಆಗಾಗ ಆಕ್ರೋಶ ವ್ಯಕ್ತಪಡಿಸೋದುಂಟು, ಪ್ರತಿಭಟನೆ ಮಾಡೋದುಂಟು.. ಸರ್ಕಾರ ಅವರ ಪ್ರತಿಭಟನೆಗೆ ಮಣಿದು ರಸ್ತೆ ನಿರ್ಮಿಸಿದ್ರೂ ಕೂಡಾ ಕೆಲವೊಮ್ಮೆ ಅಚಾತುರ್ಯ ನಡೆದುಹೋಗ್ತವೆ. ಅಂಥದ್ದೇ ಒಂದು ರಸ್ತೆಯ ಉದಾಹರಣೆ ಇಲ್ಲಿದೆ..