ಹೈಕಮಾಂಡ್ ಆದೇಶದಂತೆ 10 ಮಂದಿ ನಾಳೆ ಸಚಿವರಾಗ್ತಾರೆ ಎಂದ ಸಿಎಂ - karnataka Cabinet expansion news
ನಾಳೆ ಬಹು ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗ್ತಿದೆ. ಅರ್ಹಗೊಂಡಿರುವ 10 ಮಂದಿ ಮಾತ್ರ ಸಿಎಂ ಯಡಿಯೂರಪ್ಪ ಅವರ ಕ್ಯಾಬಿನೆಟ್‌ಗೆ ಸೇರ್ಪಡೆಯಾಗ್ತಿದ್ದಾರೆ. ಆದ್ರೆ ಮಹೇಶ್ ಕುಮಟಳ್ಳಿ ಹಾಗೂ ಪರಾಭವಗೊಂಡಿರುವ ಎಂಟಿಬಿ ನಾಗರಾಜ್, ಹಳ್ಕಿ ಹಕ್ಕಿ ಹೆಚ್ ವಿಶ್ವನಾಥ್‌ಗೆ ಸಚಿವ ಸ್ಥಾನ ಸಿಗ್ತಿಲ್ಲ. ಜೊತೆಗೆ ತಾನು ಕೂಡ ಪಕ್ಕಾ ಮಿನಿಸ್ಟರ್ ಆಗ್ತೀನೆಂಬ ಕನಸು ಕಾಣ್ತಿದ್ದ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿಗೆ ಮತ್ತೆ ನಿರಾಸೆಯಾಗಿದೆ...