ರಸ್ತೆ ದಾಟಲು ಹೋದ ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪಾರು! ವಿಡಿಯೋ - gadag flood
ಗದಗ: ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆ ನೀರಿನಿಂದ ಆವೃತ್ತವಾಗಿದ್ದ ರಸ್ತೆ ದಾಟಲು ಹೋದ ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ನಡೆದಿದೆ. ನೋಡು ನೋಡುತ್ತಿದ್ದಂತೆ ಬೈಕ್ ಸವಾರರು ನದಿಗೆ ಬಿದ್ದಿದ್ದು, ತಕ್ಷಣವೇ ಅಲ್ಲೇ ಇದ್ದ ಸ್ಥಳೀಯರು ಬೈಕ್ ಸವಾರರನ್ನು ಕಾಪಾಡಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.