ಉಳುಮೆಗೆ ಬೈಕ್ ಬಳಕೆ: ಕೃಷಿ ಚಟುವಟಿಕೆಯಲ್ಲಿ ಅನ್ನದಾತನ ಹೊಸ ಪ್ರಯತ್ನ - ಹಸನ ಸಾಬ
ಹಾನಗಲ್ (ಹಾವೇರಿ): ರೈತನೋರ್ವ ದ್ವಿಚಕ್ರ ವಾಹನಕ್ಕೆ ಕುಂಟಿಕಟ್ಟಿ ಗೋವಿನ ಜೋಳದ ಹೊಲವನ್ನು ಉಳುಮೆ ಮಾಡುತ್ತಿದ್ದಾನೆ. ಕರಗುದರಿ ಗ್ರಾಮದಲ್ಲಿನ ಹಸನ ಸಾಬ ಎಂಬಾತ ತನ್ನ ಜಮೀನನ್ನು ಈ ರೀತಿ ಹಸನು ಮಾಡುತ್ತಿದ್ದಾನೆ. ಅದೆಷ್ಟೋ ಜನರು ಎತ್ತುಗಳ ಬದಲಿಗೆ ಹೊಸ ತಂತ್ರಜ್ಞಾನ ಬಳಸಿ ಹೊಲ ಉಳುಮೆ ಮಾಡುತ್ತಿದ್ದಾರೆ. ಎತ್ತಿನ ಜೋಡಿಗಳಿಗೆ 500 ರೂ. ಖರ್ಚಾಗುತ್ತಂತೆ. ಹೀಗೆ ದ್ವಿಚಕ್ರ ವಾಹನವನ್ನು ಬಳಸುವುದರಿಂದ ನಮ್ಮಂತಹ ಸಣ್ಣ ರೈತರ ಉಳುಮೆ ಸುಲಭವಾಗಿದೆ ಅಂತಾರೆ ರೈತರು.