ಕರ್ನಾಟಕ

karnataka

ETV Bharat / videos

ಗುಡ್ಡದಲ್ಲಿ ಪ್ರವಾಹಕ್ಕೆ ಸಿಲುಕಿದ್ದ 30 ಮಂದಿ ...ಸ್ಥಳಾಂತರಕ್ಕೆ ಆ ಸಂತ್ರಸ್ತರು ಷರತ್ತು ಹಾಕಿದ್ದೇಕೆ? - flood in bagalakote

By

Published : Aug 9, 2019, 9:55 PM IST

Updated : Aug 9, 2019, 10:46 PM IST

ಬಾಗಲಕೋಟೆ : ಜಿಲ್ಲೆಯ ಬಾದಾಮಿ ತಾಲೂಕಿನ ಎಸ್.ಪಿ. ನಾಗರಾಳ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿರುವವರನ್ನು ಹುಡುಕುತ್ತಾ ಸಾಗಿದ ಅಗ್ನಿ ಶಾಮಕ ದಳದವರಿಗೆ ಗುಡ್ಡದ ಪ್ರದೇಶವೊಂದರಲ್ಲಿ 30 ಜನರು ಇರುವುದು ಕಂಡು ಬಂದಿತಾದರೂ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲು ಆಗಲಿಲ್ಲ. ಜಾನುವಾರುಗಳು ಇರುವುದರಿಂದ ಆ ಪ್ರದೇಶದಿಂದ ಬಿಟ್ಟು ಬರಲು ಅವರು ಒಪ್ಪಲಿಲ್ಲ. ನಮ್ಮ ಹತ್ತಿರ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳಿದ್ದು, ಅವುಗಳನ್ನು ಸ್ಥಳಾಂತರ ಮಾಡುವಾಗ ಪ್ರಾಣಾಪಾಯ ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ನಾವು ಇಲ್ಲೆ ಇರುತ್ತೇವೆ ಎಂದು ಜಿಲ್ಲಾ ಪಂಚಾಯತ್​​ನ ಸಿಇಒ ಗಂಗೂಬಾಯಿ ಮಾನಕರ ಅವರಿಗೆ ಮನವಿ ಮಾಡಿಕೊಂಡರು. ಪರಿಸ್ಥಿತಿ ಗಮನಿಸಿದ ಅಧಿಕಾರಿಗಳು ಊಟದ ವ್ಯವಸ್ಥೆ ಮಾಡಿ, ಮೂರು ದಿನಗಳ ಕಾಲ ಆಗುವಷ್ಟು ಅಡುಗೆ ಪದಾರ್ಥಗಳನ್ನು ನೀಡಿ ಸುರಕ್ಷಿತ ವಾಗಿರುವಂತೆ ತಿಳಿಸಿ ವಾಪಸ್​ ಬಂದಿದ್ದಾರೆ.
Last Updated : Aug 9, 2019, 10:46 PM IST

ABOUT THE AUTHOR

...view details