ಕರ್ನಾಟಕ

karnataka

ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ: ಇಲ್ಲಿದೆ ಪ್ರತ್ಯಕ್ಷ ವರದಿ

By

Published : Jul 2, 2020, 10:45 AM IST

Published : Jul 2, 2020, 10:45 AM IST

ಕೊಪ್ಪಳ: ಜೂನ್ 29 ಹಾಗೂ 30 ರಂದು ಎರಡು ದಿನ ಯಾವುದೇ ಪಾಸಿಟಿವ್ ಕೇಸ್ ಪತ್ತೆಯಾಗಿರಲಿಲ್ಲ. 21 ಜನ ಸೋಂಕಿತರು ಗುಣಮುಖರಾಗಿ ಆಶಾಭಾವನೆ ಮೂಡಿಸಿದ್ದರು. ಆದರೆ, ಜಿಲ್ಲೆಯಲ್ಲಿ ನಿನ್ನೆ ಸಂಜೆಯ ವೇಳೆಗೆ 13 ಜನ ಸೋಂಕಿತರು ಪತ್ತೆಯಾಗುವ ಮೂಲಕ ಜನರಲ್ಲಿ ಆತಂಕ ಇಮ್ಮಡಿಯಾಗುವಂತೆ ಮಾಡಿದೆ. ಜುಲೈ 1 ಸಂಜೆಯವರೆಗೆ ನಾಲ್ವರು ಮಕ್ಕಳು ಸೇರಿ ಒಟ್ಟು 13 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ 8 ಜನರು ಗಂಗಾವತಿ ತಾಲೂಕಿನವರಾಗಿದ್ದಾರೆ.‌ ಹೀಗಾಗಿ ಗಂಗಾವತಿ ತಾಲೂಕಿನಲ್ಲಿ ದಿನೇ ದಿನೆ ಆತಂಕ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 97 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ ಶತಕದ ಸಮೀಪ ಬಂದಿದೆ. ಈ ಪೈಕಿ ಒಟ್ಟು 41 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಇನ್ನೂ 55 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details