ಅಣ್ಣಾವ್ರು ಇದ್ದ ಚಿತ್ರರಂಗಕ್ಕೂ,ಈಗಿನ ಚಿತ್ರರಂಗಕ್ಕೂ ಸಾಕಷ್ಟು ವ್ಯತ್ಯಾಸ ಇದೆ...ಸಾ.ರಾ. ಗೋವಿಂದು - Kannada film industry drug mafia
ಮಾದಕ ದ್ರವ್ಯ ಜಾಲದ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ವಾರದಿಂದ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಕೆಲವರು ಚಿತ್ರರಂಗದಲ್ಲಿ ಡ್ರಗ್ಸ್ ಸಮಸ್ಯೆ ಇಲ್ಲ. ಇದೆಲ್ಲಾ ಸುಳ್ಳು ಆರೋಪ ಎಂದರೆ ಮತ್ತೆ ಕೆಲವರು ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಸೇವಿಸುವವರು ಇದ್ದಾರೆ ಎನ್ನುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಡಾ. ರಾಜ್ಕುಮಾರ್ ಅವರಿದ್ದ ಚಿತ್ರರಂಗಕ್ಕೂ ಈಗಿನ ಚಿತ್ರರಂಗಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಆದರೆ ಈ 45 ವರ್ಷಗಳ ಸಿನಿಮಾ ನಂಟಿನಲ್ಲಿ ಚಿತ್ರರಂಗದಲ್ಲಿ ಡ್ರಗ್ಸ್ ಚಟ ಇದೆ ಎಂಬ ವಿಚಾರವನ್ನು ನಾನು ಕೇಳಿಲ್ಲ ಎಂದಿದ್ದಾರೆ. ಅಲ್ಲದೆ ಮತ್ತಷ್ಟು ವಿಚಾರಗಳ ಬಗ್ಗೆ ಸಾ.ರಾ. ಗೋವಿಂದು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.