ನಾವಿಬ್ರೂ ಚೆನ್ನಾಗಿಯೇ ಇದ್ದೇವೆ, ನಮಗಾಗಿ ಕಿತ್ತಾಡಬೇಡಿ : ಅಭಿಮಾನಿಗಳಲ್ಲಿ ಅಕ್ಷಯ್, ಅಜಯ್ ಮನವಿ - ಅಕ್ಷಯ್ ಕುಮಾರ್
ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಾವು ಪರದೆ ಹಿಂದೆಯೂ, ಪರದೆ ಒಳಗೂ ಕೂಡ ಸ್ನೇಹಿತರೇ. ನಮ್ಮ ಸಲುವಾಗಿ ಅಭಿಮಾನಿಗಳು ಜಗಳ ಮಾಡಿಕೊಳ್ಳಬೇಡಿ ಎಂದು ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸೂರ್ಯವಂಶಿ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಿವುಡ್ ನಟರು ಅಭಿಮಾನಿಗಳಲ್ಲಿ ಜಗಳ ಮಾಡಿಕೊಳ್ಳದಂತೆ ಮನವಿ ಮಾಡಿದ್ದಾರೆ. ಈ ಹಿಂದೆ ಈ ಇಬ್ಬರು ಅಭಿಮಾನಿಗಳ ನಡುವೆ ಮುಸುಕಿನ ಗುದ್ದಾಟ ಇತ್ತು ಎಂಬ ವದಂತಿಗಳು ಹರಿದಾಡಿದ್ದವು.