ದಿವ್ಯಾಂಗ ಯುವತಿಯ ಬುದ್ದಿವಂತಿಕೆಯ ನುಡಿ! ಗವಿಮಠದ ಭಕ್ತೆಯ ಭಾಷಣಕ್ಕೆ ಸಿಳ್ಳೆ, ಚಪ್ಪಾಳೆ - ಗವಿಮಠದ ಜಾತ್ರಾ ಸಂಪ್ರದಾಯ
ಕೊಪ್ಪಳ ಗವಿಮಠದ ಜಾತ್ರೋತ್ಸವ ಅಂಗವಾಗಿ ಕೈಲಾಸ ಮಂಟಪ ವೇದಿಕೆಯಲ್ಲಿ ಜರುಗಿದ 'ಭಕ್ತ ಹಿತ ಚಿಂತನ' ಕಾರ್ಯಕ್ರಮದಲ್ಲಿ ವಿಶೇಷಚೇತನ ಯುವತಿಯೋರ್ವಳ ಬುದ್ಧಿವಂತಿಕೆಯ ಎರಡು ಮಾತುಗಳು ನೆರೆದಿದ್ದ ಜನರು ಚಪ್ಪಾಳೆ ಗಿಟ್ಟಿಸಿತು. ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಗವಿಸಿದ್ದೇಶ್ವರ ಶ್ರೀಗಳು ಮಾತನಾಡುವಾಗ, ವೇದಿಕೆ ಏರಿ ಬಂದ ಹಿರೇಸೂಳಿಕೇರಿಯ ಪವಿತ್ರ ಎಂಬಾಕೆ, ನಾನು ಮಾತನಾಡುತ್ತೇನೆ ಎಂದಳು. ಆಗ ಶ್ರೀಗಳು ಮೈಕ್ ಕೊಟ್ಟು ಮಾತನಾಡಲು ಬಿಟ್ಟರು. ಗವಿಸಿದ್ದೇಶ್ವರ ಮಹಾರಾಜ್‌ಕೀ ಜೈ ಎಂದು ಮಾತು ಆರಂಭಿಸಿದ ಯುವತಿ, ಅಕ್ಕತಂಗಿಯರೇ, ಅಣ್ಣ ತಮ್ಮಂದಿರೇ, ತಂದೆ ತಾಯಿಗಳೇ ಎಲ್ಲರಿಗೂ ನಮಸ್ಕಾರ. ಅಜ್ಜ ಎಲ್ಲದನ್ನೂ ಮಾಡಿದ್ದಾನೆ. ಅನ್ನದಾನ, ವಿದ್ಯಾದಾನ ಮಾಡಿದ್ದಾನೆ. ಬಾಳೆಹಣ್ಣು ದೇವಸ್ಥಾನದಿಂದ ಕೊಡುವಾಗ ಬಾಳೆ ಹಣ್ಣು ಅನ್ನಲ್ಲ, ಪ್ರಸಾದ ಅಂತೀವಿ. ದುಡ್ಡು ಇದ್ದವರು ದೊಡ್ಡವರಲ್ಲ, ಮನಸು ದೊಡ್ಡದಿದ್ದವರು ದೊಡ್ಡವರು ಎಂದು ತನ್ನಲ್ಲಿದ್ದ ಹಣವನ್ನು ಶಾಲೆ ಕಟ್ಟೋಕೆ ಪ್ರೇಮಕ್ಕೆ ಕೊಟ್ಟಿನಿ ಎಂದು ಭಕ್ತಿಯ ಕಾಣಿಕೆ ಅರ್ಪಿಸಿ ಶ್ರೀಗಳ ಕಾಲಿಗೆರಗಿದಳು. ಇನ್ನು, ಗವಿಮಠದ ಜಾತ್ರಾ ಸಂಪ್ರದಾಯದಲ್ಲೊಂದಾಗಿರುವ ಸುಡುಮದ್ದು ಕಾರ್ಯಕ್ರಮ ಜಾತ್ರೆಯ ಎರಡನೇ ದಿನ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆ ಮೆರವಣಿಗೆ ಹೊರಟ ಶ್ರೀ ಸಿದ್ದೇಶ್ವರ ಮೂರ್ತಿ ರಾತ್ರಿ 11 ಗಂಟೆ ಸುಮಾರಿಗೆ ಮರಳಿ ಗವಿಮಠ ತಲುಪುತ್ತದೆ. ಆಗ ಮದ್ದು ಸುಡಲಾಗುತ್ತದೆ. ಕೆಲಕಾಲ ಆಕಾಶದ ತುಂಬೆಲ್ಲ ಬೆಳಕಿನ ದೃಶ್ಯ ವೈಭವ ಕಂಡುಬಂದಿದ್ದು, ಲಕ್ಷಾಂತರ ಭಕ್ತರು ಪುಳಕಗೊಂಡರು. ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾದ ಜಾತ್ರಾ ಮಹೋತ್ಸವದ ದೃಶ್ಯ ನೋಡಿ.
Last Updated : Feb 3, 2023, 8:38 PM IST