ವಿಜಯನಗರ: ಬೆಂಕಿಗಾಹುತಿಯಾದ ಆರು ಗುಡಿಸಲು, ಲಕ್ಷಾಂತರ ರೂ. ನಷ್ಟ - fire
ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದಲ್ಲಿ ಆರು ಮನೆಗಳು ಬೆಂಕಿಗಾಹುತಿಯಾಗಿ ಸುಟ್ಟು ಹೋಗಿದೆ. ಶನಿವಾರ ಮಧ್ಯಾಹ್ನ ಗ್ರಾಮದ ಪೂಜಾರಿ ಕೊಳ್ಳಪ್ಪ, ಪೂಜಾರಿ ಸೋಮಪ್ಪ, ಬುಲ್ಡಿ ಹನುಮಂತಪ್ಪ ಯರಿಸ್ವಾಮಿ, ಅಂಜಿನಪ್ಪ, ರಾಮಪ್ಪ ಎನ್ನುವವರಿಗೆ ಸೇರಿದ ಗುಡಿಸಲುಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಆರು ಗುಡಿಸಲುಗಳು ಭಸ್ಮವಾಗಿವೆ.
ಗುಡಿಸಲಿನಲ್ಲಿ ವಾಸವಿದ್ದ ನಿವಾಸಿಗಳು ಕಬ್ಬು ಕಟಾವಿಗೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ, ಮನೆಯಲ್ಲಿದ್ದ ದವಸಧಾನ್ಯ, ಮನೆ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ರಾಮಪ್ಪ ಎನ್ನುವವರ ಮನೆಯಲ್ಲಿದ್ದ ಬೈಕ್ ಕೂಡ ಸುಟ್ಟು ಹೋಗಿ ಲಕ್ಷಾಂತರ ರೂ. ಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳ, ಬಿ.ಎಂ.ಎಂ.ಅಗ್ನಿಶಾಮಕ ದಳ ಸಕಾಲಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.