ಮೈಸೂರು: ಗ್ರಾಹಕರ ಸೋಗಿನಲ್ಲಿ ಬಂದು ಸೀರೆ ಕದ್ದೊಯ್ದ ಕಳ್ಳಿಯರು- ವಿಡಿಯೋ - etv bharat kannada
Published : Nov 6, 2023, 5:34 PM IST
|Updated : Nov 6, 2023, 5:46 PM IST
ಮೈಸೂರು:ಸೀರೆ ಖರೀದಿಗೆ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರ ಗುಂಪೊಂದು ಅಂಗಡಿಯೊಂದರಲ್ಲಿ ಸಾವಿರಾರು ರೂಪಾಯಿ ಮೌಲ್ಯದ ಸೀರೆ ಕದ್ದು ಪರಾರಿಯಾಗಿದ್ದಾರೆ. ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎರಡು ದಿನಗಳ ಹಿಂದೆ ನಜರ್ಬಾದ್ನಲ್ಲಿರುವ ಯುವರಾಜ ಸಿಲ್ಕ್ ಹೌಸ್ನಲ್ಲಿ ಸೀರೆ ಖರೀದಿಯ ನೆಪದಲ್ಲಿ ಬಂದ ಮಹಿಳೆಯರ ಗುಂಪು ಸೀರೆ ನೋಡುವಂತೆ ನಟಿಸಿ ಆ ಸಂದರ್ಭದಲ್ಲಿ ಅಂಗಡಿ ಕೆಲಸಗಾರರ ಕಣ್ತಪ್ಪಿಸಿ ದುಬಾರಿ ಬೆಲೆಯ ಸಿಲ್ಕ್ ಸೀರೆಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ದೃಶ್ಯ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಅಂಗಡಿ ಮಾಲೀಕರು ನಜರ್ ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೀರೆ ಕಳ್ಳಿಯರ ಪತ್ತೆಗೆ ಬಲೆ ಬೀಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಮೈಸೂರು ನಗರದ ವಾಣಿಜ್ಯ ಪ್ರದೇಶಗಳಾದ ಶಿವರಾಂಪೇಟೆ, ಸಯ್ಯಾಜಿರಾವ್ ರಸ್ತೆ, ಗಾಂಧಿ ವೃತ್ತ ಸೇರಿದಂತೆ ಪ್ರಮುಖ ಸೀರೆ ಅಂಗಡಿಗಳಿರುವ ಪ್ರದೇಶದಲ್ಲಿ ಸೀರೆ ಕಳ್ಳಿಯರ ಗ್ಯಾಂಗ್ ಆ್ಯಕ್ಟಿವ್ ಆಗಿದೆ. ಇವರು ಅಂಗಡಿಯವರ ಕಣ್ತಪ್ಪಿಸಿ ಕೃತ್ಯವೆಸಗಿರಬಹುದು, ಆದರೆ ಸಿಸಿಟಿವಿಯಲ್ಲಿ ಕೈಚಳಕ ಸೆರೆಯಾಗುತ್ತೆ ಅನ್ನೋದು ಈ ಚಾಲಾಕಿಗಳಿಗೆ ತಿಳಿದಂತಿಲ್ಲ.
ಇದನ್ನೂ ಓದಿ:ಕೋರ್ಟ್ ಆವರಣದಲ್ಲಿರುವ ಅಂಚೆ ಕಚೇರಿಯಲ್ಲೇ ಕೈಚಳಕ ತೋರಿಸಿದ ಕಳ್ಳರು.. ನಗದು ದೋಚಿ ಪರಾರಿ: ಪ್ರಕರಣ ದಾಖಲು