ಕರ್ನಾಟಕ

karnataka

ಪ್ರಚಾರಕ್ಕೆ ತೆರಳಿದ ಬಿ ವೈ ವಿಜಯೇಂದ್ರರಿಗೆ ತರಲಘಟ್ಟ ತಾಂಡದಲ್ಲಿ ಮೀಸಲು ವಿರೋಧ

ETV Bharat / videos

ಪ್ರಚಾರಕ್ಕೆ ತೆರಳಿದ ಬಿ.ವೈ.ವಿಜಯೇಂದ್ರರಿಗೆ ತರಲಘಟ್ಟ ತಾಂಡಾದಲ್ಲಿ ವಿರೋಧ - ಬಂಜಾರ ಸಮುದಾಯ

By

Published : Apr 16, 2023, 8:18 PM IST

ಶಿವಮೊಗ್ಗ :ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರಿಗೆ ಒಳ ಮೀಸಲು ವಿರೋಧ ವ್ಯಕ್ತವಾಗಿದೆ. ಶಿಕಾರಿಪುರ ತಾಲೂಕು ತರಲಘಟ್ಟ ತಾಂಡಾಕ್ಕೆ ಇಂದು ಮತ ಪ್ರಚಾರಕ್ಕೆ ಹೋದಾಗ ತಾಂಡಾ ಜನರು ಅಸಮಾಧಾನ ವ್ಯಕ್ತಪಡಿಸಿದರು. ತಾಂಡ ಬಚಾವೋ, ಬಿಜೆಪಿ ಹಠಾವೋ ಎಂದು ಘೋಷಣೆ ಕೂಗಿದರು. ಇದರಿಂದಾಗಿ ವಿಜಯೇಂದ್ರ ಪ್ರಚಾರ ನಡೆಸದೆ ತಮ್ಮ ಕಾರಿನಲ್ಲಿ ವಾಪಸ್ ಆದರು. ವಿಜಯೇಂದ್ರ ಕಳೆದ ನಾಲ್ಕೈದು ದಿನಗಳಿಂದ ಶಿಕಾರಿಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. 

ತಾಲೂಕಿನ‌ ಬಂಜಾರ ಸಮುದಾಯದ ರಾಮನಾಯ್ಕ ಸೇರಿದಂತೆ ಇತರರನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗಿದ್ದರು. ತಾಂಡದವರು ಒಳ ಮೀಸಲು ಕಡಿತಗೊಳಿಸಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಜಾರ ಸಮುದಾಯದ ಮುಖಂಡರು ಜನರನ್ನು ಸಮಾಧಾನಗೊಳಿಸಲು ಯತ್ನಿಸಿದಾಗ ಅವರನ್ನೂ ವಿರೋಧಿಸಿ ಕಳುಹಿಸಿದ್ದಾರೆ.

ಕಳೆದ ತಿಂಗಳು ಬಂಜಾರ ಸಮುದಾಯಕ್ಕೆ ರಾಜ್ಯ ಸರ್ಕಾರ ಒಳ‌ ಮೀಸಲು ಕಡಿತಗೊಳಿಸಿ ಆದೇಶ ಜಾರಿ ಮಾಡಿದಾಗ ಅನೇಕ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಶಿಕಾರಿಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. 

ಇದನ್ನೂ ಓದಿ :ಯಡಿಯೂರಪ್ಪ ಪುತ್ರ ಎನ್ನುವ ಕಾರಣಕ್ಕೆ ನನಗೆ ಟಿಕೆಟ್ ನೀಡಿಲ್ಲ: ಬಿ ವೈ ವಿಜಯೇಂದ್ರ

ABOUT THE AUTHOR

...view details