India Couture Week: ಡಿಸೈನರ್ ರಾಹುಲ್ ಮಿಶ್ರಾಗಾಗಿ ಶ್ರದ್ಧಾ ರ್ಯಾಂಪ್ ವಾಕ್...'ನಾನು ಧರಿಸಿರುವ ಉಡುಪು ವಿಶೇಷ'-ವಿಡಿಯೋ
ನವದೆಹಲಿ:ನವದೆಹಲಿಯಲ್ಲಿ ಜುಲೈ 25 ಕ್ಕೆ ಪ್ರಾರಂಭವಾದ ಫ್ಯಾಷನ್ ಈವೆಂಟ್ ಇಂಡಿಯಾ ಕೌಚರ್ ವೀಕ್ 2023 ಆಗಸ್ಟ್ 2ಕ್ಕೆ ಮುಕ್ತಾಯವಾಯಿತು. ಈ ಮೆಗಾ ಈವೆಂಟ್ನ್ನು ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಹ್ಯುಂಡೈ ಮೋಟಾರ್ ಇಂಡಿಯಾ ಜಂಟಿಯಾಗಿ ಆಯೋಜಿಸಿದ್ದವು. ಈ ಕಾರ್ಯಕ್ರಮದಲ್ಲಿ ಡಿಸೈನರ್ ರಾಹುಲ್ ಮಿಶ್ರಾ ಅವರಿಗಾಗಿ ರ್ಯಾಂಪ್ ವಾಕ್ ಮಾಡಿದ ಶ್ರದ್ಧಾ ಕಪೂರ್ ತಾವು ಧರಿಸಿದ್ದ ಉಡುಗೆ ಮತ್ತು ವಿನ್ಯಾಸದ ಬಗ್ಗೆ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದರು.
'ನಾನು ಧರಿಸಿರುವ ಉಡುಪು ಹೆಚ್ಚು ವಿಶೇಷವಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಇದು ಕಲೆಗಾರನ ಕಲೆಗೆ ಸಾಕ್ಷಿಯಾಗಿದೆ. ಈ ಬಟ್ಟೆಯನ್ನು ಸುಂದರಾವಗಿ ವಿನ್ಯಾಸಗೊಳಿಸಲು, ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ನಾನು ಅತ್ಯಂತ ಸುಂದರವಾಗಿ ಕಾಣುತ್ತಿದ್ದೇನೆ. ಈ ಉಡುಪನ್ನು ಧರಿಸುವ ಮೂಲಕ, ತಯಾರಕ ಪ್ರತಿನಿಧಿಯಾಗಿ ಇಲ್ಲಿ ನಾನು ಕಂಗೊಳಿಸಿದೆ. ನನಗೆ ಇದು ತುಂಬಾ ಹೆಮ್ಮೆಯ ಕ್ಷಣವಾಗಿದೆ' ಎಂದು ನಟಿ ಸಂತಸ ವ್ಯಕ್ತಪಡಿಸಿದರು.
ಇನ್ನು ನಿಮಗೆಲ್ಲ ತಿಳಿದಿರುವಂತೆ ಭಾರತೀಯ ಫ್ಯಾಷನ್ ಡಿಸೈನರ್ ರಾಹುಲ್ ಮಿಶ್ರಾ ಪ್ಯಾರಿಸ್ನಲ್ಲಿ ನಡೆದ ಹಾಟ್ ಕೌಚರ್ ವೀಕ್ನಲ್ಲಿ ಪ್ರದರ್ಶನಕ್ಕೆ ಆಹ್ವಾನಿಸಲ್ಪಟ್ಟ ಮೊದಲ ಭಾರತೀಯ ವಿನ್ಯಾಸಕ. ಅವರು 2014 ರಲ್ಲಿ ಮಿಲನ್ ಫ್ಯಾಶನ್ ವೀಕ್ನಲ್ಲಿ ಅಂತರರಾಷ್ಟ್ರೀಯ ವೂಲ್ಮಾರ್ಕ್ ಪ್ರಶಸ್ತಿಯನ್ನು ಗೆದ್ದರು, ಈ ಮೂಲಕ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ವಿನ್ಯಾಸಕರಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ:India Couture Week 2023: ಫ್ಯಾಷನ್ ಈವೆಂಟ್ನಲ್ಲಿ ಮಿಂಚಿದ ದಿಶಾ ಪಟಾನಿ, ಸಾರಾ ಅಲಿ ಖಾನ್, ಆದಿತ್ಯ ರಾಯ್ ಕಪೂರ್