ಕರ್ನಾಟಕ

karnataka

ಚರಂಡಿ ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಓರ್ವ ಕಾರ್ಮಿಕ ಸಾವು: ಮೂವರ ಸ್ಥಿತಿ ಗಂಭೀರ

ETV Bharat / videos

ಚರಂಡಿ ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಕಾರ್ಮಿಕ ಸಾವು: ಮೂವರ ಸ್ಥಿತಿ ಗಂಭೀರ

By

Published : Jul 27, 2023, 9:36 PM IST

ಸಂಗ್ರೂರು (ಪಂಜಾಬ್​): ಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ ವಿಷಾನಿಲ ಸೇವಿಸಿ ಕಾರ್ಮಿಕ ಮೃತಪಟ್ಟು, ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಘಟನೆ ಪಂಜಾಬ್​ನ ಸಂಗ್ರೂರು ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಮೊದಲಿಗೆ ಒಬ್ಬ ಚರಂಡಿಗೆ ಇಳಿದಿದ್ದ, ಇತರ ರಕ್ಷಣೆಗೆ ಉಳಿದವರು ಹೋಗಿದ್ದಾಗ ಈ ದುರಂತ ಸಂಭವಿಸಿದ್ದಾರೆ.

ಇಲ್ಲಿನ ಲೆಹರಗಾಗ್​ನಲ್ಲಿ ಸ್ವಚ್ಛತಾ ಕಾರ್ಮಿಕರು ಕೊಳಚೆ ನೀರು ಸ್ವಚ್ಛಗೊಳಿಸಲು ಬಂದಾಗ ಚರಂಡಿಯ ಮುಚ್ಚಳ ತೆರೆದಿದ್ದಾರೆ. ಇದರಿಂದ ತಕ್ಷಣ ಓರ್ವ ಕಾರ್ಮಿಕ ವಿಷಾನಿಲದಿಂದ ಪ್ರಜ್ಞೆ ತಪ್ಪಿ ಚರಂಡಿಯೊಳಗೆ ಬಿದ್ದಿದ್ದಾನೆ. ಪರಿಣಾಮ ಈತನನ್ನು ಹೊರತೆಗೆಯಲು ಮತ್ತೊಬ್ಬ ಕಾರ್ಮಿಕ ಧಾವಿಸುತ್ತಾನೆ. ಆದರೆ, ಆತ ಕೂಡ ವಿಷಾನಿಲದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಅದೇ ರೀತಿಯಾಗಿ ಮತ್ತಿಬ್ಬರು ಕಾರ್ಮಿಕರು ವಿಷಾನಿಲ ಸೇವಿಸಿ ಪ್ರಜ್ಞೆ ತಪ್ಪಿದ್ದಾರೆ.

ಈ ಘಟನೆಯಲ್ಲಿ ಓರ್ವ ಕಾರ್ಮಿಕ ಅಸುನೀಗಿದ್ದಾನೆ. ಇತರ ಮೂವರು ಸ್ಥಿತಿ ಸಹ ಗಂಭೀರವಾಗಿದೆ. ಕಾರ್ಮಿಕನ ಸಾವಿಗೆ ಆಡಳಿತವೇ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಅಧಿಕಾರಿಗಳು ಮತ್ತು ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೂ ಯಾರೂ ಸರಿಯಾದ ಸಮಯಕ್ಕೆ ಬರಲಿಲ್ಲ. ಸ್ಥಳೀಯ ಜನರೇ ಕಾರ್ಯಾಚರಣೆ ಕೈಗೊಂಡರು. ಆಂಬ್ಯುಲೆನ್ಸ್​ ಬರುವಷ್ಟರಲ್ಲೇ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದರು ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಸದ್ಯ ಗಂಭೀರ ಸ್ಥಿತಿಯಲ್ಲಿರುವ ಮೂವರನ್ನು ಸಂಗ್ರೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಮಾತನಾಡಿ, ಕೊಳಚೆ ನೀರು ಸ್ವಚ್ಛಗೊಳಿಸುವ ವೇಳೆ ಅವಘಡ ಸಂಭವಿಸಿರುವ ಬಗ್ಗೆ ಬೆಳಗ್ಗೆ 9.00 ಗಂಟೆಗೆ ಮಾಹಿತಿ ಸಿಕ್ಕಿತು. ಇದರಿಂದ ತಕ್ಷಣವೇ ನಮ್ಮ ತಂಡಗಳನ್ನು ರವಾನಿಸಲಾಗಿತ್ತು ಎಂದು ಹೇಳಿದ್ದಾರೆ. ಮತ್ತೊಂದೆಡೆ, ಡಿಎಸ್ಪಿ ಪುಷ್ಪಿಂದರ್ ಸಿಂಗ್ ಪ್ರತಿಕ್ರಿಯಿಸಿ, ಈ ಘಟನೆ ಬಗ್ಗೆ ಪೊಲೀಸ್​ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. 

ಇದನ್ನೂ ಓದಿ:ಒಳ ಚರಂಡಿ ದುರಸ್ತಿಗೆ ತೆರಳಿದ್ದ ಮೂವರು ವಿಷ ಅನಿಲ ಸೇವಿಸಿ ಸಾವು!

ABOUT THE AUTHOR

...view details