Watch.. ಸಾಯಿ ಮಂದಿರಕ್ಕೆ 7 ಲಕ್ಷ ಮೌಲ್ಯದ ಸಿಂಹಾಸನ ಕಾಣಿಕೆ ನೀಡಿದ ದಂಪತಿ - ಕುಂಭಾರಿಯ ಸಾಯಿ ಮಂದಿರ ವಾರ್ಷಿಕೋತ್ಸವ
ಕೋಪರಗಾಂವ್ (ಮಹಾರಾಷ್ಟ್ರ): ಕೋಪರಗಾಂವ್ ತಾಲೂಕಿನ ಕುಂಭಾರಿಯಲ್ಲಿರುವ ಸಾಯಿಬಾಬಾ ಮಂದಿರದ ಪ್ರಥಮ ವಾರ್ಷಿಕೋತ್ಸವ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. ವಾಷೀಕೋತ್ಸವದ ನಿಮಿತ್ತ ಹೈದರಾಬಾದ್‌ನ ಸಾಯಿಬಾಬರ ಭಕ್ತರಾದ ಕೀರ್ತಿ ಗೋಪಿಕೃಷ್ಣನ್ ಮತ್ತು ಎಸ್ ಗೋಪಿಕೃಷ್ಣನ್ ದಂಪತಿ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಹಿತ್ತಾಳೆಯ ಸಿಂಹಾಸನವನ್ನು ಸಾಯಿಬಾಬಾ ಮಂದಿರಕ್ಕೆ ಕಾಣಿಕೆ ನೀಡಿದ್ದಾರೆ. ಈ ಹಿಂದೆ ದೇವಸ್ಥಾನಕ್ಕೆ 5 ಲಕ್ಷ ರೂಪಾಯಿ ಮೌಲ್ಯದ ಸಾಯಿಬಾಬಾ ಮೂರ್ತಿಯನ್ನು ಕೊಡುಗೆಯಾಗಿ ನೀಡಿದ್ದರು. ಮತ್ತೊಬ್ಬ ಭಕ್ತೆ ಕಲ್ಪನಾ ಆನಂದ್‌ಜಿ ಎಂಬುವವರು ಬೆಳ್ಳಿಯ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದರು.
ವಾರ್ಷಿಕೋತ್ಸವ ಹಿನ್ನೆಲೆ ಹೈದರಾಬಾದ್ ಸೇರಿಂದತೆ ಸುತ್ತಮುತ್ತ ಊರಿನ ಜನರು ಕುಂಭಾರಿ ಗ್ರಾಮಕ್ಕೆ ಆಗಮಿಸಿ ಉತ್ಸವದಲ್ಲಿ ಭಾಗಿಯಾದರು. ಇನ್ನು ಸಾಯಿ ಬಾಬಾರ ಪಲ್ಲಕ್ಕಿ ಉತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಮಂದಿರದಲ್ಲಿ ನಡೆದವು. ವಾರ್ಷಿಕೋತ್ಸವ ನಿಮಿತ್ತ ಗ್ರಾಮದ ಮನೆಗಳ ಮುಂದೆ ಬಣ್ಣದ ರಂಗೋಲಿ ಬಿಡಿಸಿ ಸಿಂಗಾರಗೊಳಿಸಲಾಗಿತ್ತು.
ಇದನ್ನೂ ಓದಿ:ಹಿಮದಿಂದ ಹೊಳೆಯುತ್ತಿರುವ ಪರ್ವತ ಶ್ರೇಣಿಗಳು: ಗಂಗೋತ್ರಿಯಲ್ಲಿ ಹಿಮಪಾತದ ಅದ್ಭುತ ದೃಶ್ಯ ನೋಡಿ