ಅಪಘಾತ ತಪ್ಪಿಸಲು ನಾಮಫಲಕ ಅಳವಡಿಕೆ: ಪಿಎಸ್ಐ,ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ - mysore news
ಮೈಸೂರು:ಚಾಮರಾಜನಗರ - ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದ ಬಳಿ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಯಾಸ್ಮಿನ್ ತಾಜ್ ಸ್ವತಃ ತಮ್ಮ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳೊಂದಿಗೆ ಅಪಘಾತ ವಲಯದ ನಾಮಫಲಕ ಮತ್ತು ರಸ್ತೆ ಡಿವೈಡರ್ ಕಂಬಗಳನ್ನು ಅಳವಡಿಸಿದ್ದಾರೆ.
ಗೋಳೂರು ಗ್ರಾಮದ ಬಳಿ ಅಪಘಾತ ಹೆಚ್ಚಾಗಿ ನಡೆಯುತ್ತಿದ್ದು ಸಾವು ನೋವುಗಳು ಸಂಭವಿಸುತ್ತಿವೆ. ಗುಂಡಿ ಬಿದ್ದ ರಸ್ತೆ ಹಾಗೂ ರಸ್ತೆಗೆ ತಡೆಗೋಡೆ ನಿರ್ಮಾಣ ಮಾಡಿ ಎಂದು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಪಿಎಸ್ಐ ಯಾಸ್ಮಿನ್ ತಾಜ್ ಅವರು ಸಿಮೆಂಟ್, ಜಲ್ಲಿ ಕಲ್ಲು ತಂದು ಗುಂಡಿ ಮುಚ್ಚಿದ್ದಲ್ಲದೇ, ರಸ್ತೆಗಳಲ್ಲಿ 16 ಟ್ರಾಫಿಕ್ ಪೋಲ್ಸ್ ಮತ್ತು 9 ಅಪಾಯ ನಾಮಫಲಕ ಅಳವಡಿಸಿದ್ದಾರೆ. ಪಿಎಸ್ಐ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹಳಿಯಾಳ-ಯಲ್ಲಾಪುರ ಹೆದ್ದಾರಿಯಲ್ಲಿ ವಾಹನ ಚಾಲಕರಿಗೆ ಗಜರಾಜನ ದರ್ಶನ- ವಿಡಿಯೋ