ಕರ್ನಾಟಕ

karnataka

ಉಮ್ಮನ್ ಚಾಂಡಿ -ಅಂತಿಮ ಯಾತ್ರೆ

ETV Bharat / videos

ನಾಳೆ ಮಾಜಿ ಸಿಎಂ ಉಮ್ಮನ್ ಚಾಂಡಿ ಅಂತ್ಯಕ್ರಿಯೆ: ಸರ್ಕಾರಿ ಗೌರವ ನಿರಾಕರಿಸಿದ ಕುಟುಂಬಸ್ಥರು - ಕೇರಳ

By

Published : Jul 19, 2023, 8:19 PM IST

ತಿರುವನಂತಪುರಂ: ನಾಳೆ (ಗುರುವಾರ) ನಡೆಯಲಿರುವ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ಅವರ ಅಂತ್ಯಕ್ರಿಯೆಯಲ್ಲಿ ಅಧಿಕೃತ ಸರ್ಕಾರಿ ಗೌರವವನ್ನು ಕುಟುಂಬಸ್ಥರು ತಿರಸ್ಕರಿಸಿದ್ದಾರೆ. ಯಾವುದೇ ಅಧಿಕೃತ ಸರ್ಕಾರಿ  ಗೌರವಗಳಿಲ್ಲದೇ ಅವರ ಅಂತ್ಯಕ್ರಿಯೆ  ಸರಳವಾಗಿ ನಡೆಸಬೇಕು ಎಂದು ಉಮ್ಮನ್ ಅವರು ಈ ಹಿಂದೆ ಅವರ ಕುಟುಂಬಕ್ಕೆ ತಿಳಿಸಿದ್ದರಂತೆ. ಚಾಂಡಿ ಅವರ ಪತ್ನಿ ಮರಿಯಮ್ಮ ಅವರು ಸಾರ್ವಜನಿಕ ಆಡಳಿತ ಇಲಾಖೆಗೆ ಈ ಬಗ್ಗೆ ಲಿಖಿತವಾಗಿ ತಿಳಿಸಿದ್ದು, ಧಾರ್ಮಿಕ ವಿಧಿವಿಧಾನಗಳು ಮಾತ್ರ ಸಾಕು ಎಂದಿದ್ದಾರೆ. ಅವರ ಇಚ್ಛೆಯಂತೆ ಯಾವುದೇ ಅಧಿಕೃತ ಗೌರವಗಳು ಅಂತ್ಯಕ್ರಿಯೆಯ ಭಾಗವಾಗಬಾರದು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕೇರಳದ ಮಾಜಿ ಸಿಎಂ, ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ನಿಧನ; ಗಣ್ಯರ ಸಂತಾಪ

ಆದರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉಮ್ಮನ್ ಚಾಂಡಿ ಅವರಿಗೆ ಸಂಪೂರ್ಣ ರಾಜ್ಯ ಗೌರವ ನೀಡಬೇಕು ಎಂದು ತಮ್ಮ ಸಂಪುಟಕ್ಕೆ ತಿಳಿಸಿದ್ದರು. ಈ ಸಂಬಂಧ ಚಾಂಡಿ ಕುಟುಂಬದ ಅಭಿಪ್ರಾಯ ಪಡೆಯುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಮಾಜಿ ಸಿಎಂ ಕುಟುಂಬಕ್ಕೆ ಸಚಿವ ಸಂಪುಟ ತೀವ್ರ ಸಂತಾಪ ಸೂಚಿಸಿದೆ. ಉಮ್ಮನ್ ಚಾಂಡಿ ಅವರ ಪಾರ್ಥಿವ ಶರೀರವನ್ನು ಕೊಟ್ಟಾಯಂ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಚೇರಿ ಮತ್ತು ತಿರುನಕ್ಕರ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಸಂಜೆ ಅವರ ಪೂರ್ವಜರ ಮನೆಯಾದ ಪುತ್ತುಪ್ಪಲ್ಲಿಯ ಕ್ಯಾರೆಟ್ ವಲ್ಲಕಲ್ಲಿಲ್ ಮತ್ತು ಹೊಸದಾಗಿ ನಿರ್ಮಿಸುತ್ತಿರುವ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಉಮ್ಮನ್ ಚಾಂಡಿ ಅವರ ಅಂತ್ಯಕ್ರಿಯೆಯು ಪುತ್ತುಪ್ಪಲ್ಲಿಯ ಸೇಂಟ್ ಜಾರ್ಜ್ ಆರ್ಥೊಡಾಕ್ಸ್ ಚರ್ಚ್‌ನಲ್ಲಿ ನಾಳೆ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನ ಮುಖ್ಯಸ್ಥರಾದ ಪರಮಪೂಜ್ಯ ಬಸೇಲಿಯೋಸ್ ಮಾರ್ಥೋಮಾ ಮ್ಯಾಥ್ಯೂಸ್ III ಅವರು ಅಂತ್ಯಕ್ರಿಯೆಯ ವಿಧಿಗಳನ್ನು ನೆರವೇರಿಸಲಿದ್ದಾರೆ. ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಸಂತಾಪ ಸಭೆ ನಡೆಯಲಿದೆ. ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಮುಂಜಾನೆ 4.25ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ:Oommen Chandy passed away: ಉಮ್ಮನ್ ಚಾಂಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕಾಂಗ್ರೆಸ್​​ ನಾಯಕರು

ABOUT THE AUTHOR

...view details