ಕರ್ನಾಟಕ

karnataka

ನೋಯ್ಡಾದ ಕಟ್ಟಡ ಸಾಮಗ್ರಿಗಳ ಪೂರೈಕೆದಾರನಿಗೆ ದೊರೆತ 40 ಲಕ್ಷ ಮೌಲ್ಯದ ವಜ್ರ

By

Published : Oct 4, 2022, 10:59 PM IST

Published : Oct 4, 2022, 10:59 PM IST

Updated : Feb 3, 2023, 8:28 PM IST

ಪನ್ನಾ(ಮಧ್ಯ ಪ್ರದೇಶ ): ದೇಶ ವಿದೇಶದಲ್ಲಿಯೇ ಅಮೂಲ್ಯ ವಜ್ರಗಳಿಗೆ ಹೆಸರುವಾಸಿಯಾಗಿರುವ ಪನ್ನಾದಲ್ಲಿ ಅಪರೂಪದ ವಜ್ರ ಪತ್ತೆಯಾಗಿದೆ. ಈ ವಜ್ರ ನೋಯ್ಡಾದ ನಿವಾಸಿ ಮೀನಾ ರಾಣಾ ಪ್ರತಾಪ್ ಅವರನ್ನು ರಾತ್ರೋರಾತ್ರಿ ಲಕ್ಷಾಧಿಪತಿ ಮಾಡಿದೆ. ರಾಣಾ ಪ್ರತಾಪ್ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ವಜ್ರ ಕಚೇರಿಯಿಂದ ಗುತ್ತಿಗೆ ಪಡೆದು ಸಿರ್ಸ್ವಾಹಾದ ಭರ್ಕಾ ಗಣಿ ಪ್ರದೇಶದಲ್ಲಿ ವಜ್ರದ ಗಣಿ ಸ್ಥಾಪಿಸಿದ್ದರು. ಇದೀಗ ಆರು ತಿಂಗಳ ಬಳಿಕ ನವರಾತ್ರಿಯ ನವಮಿಯಂದು 9.64 ಕ್ಯಾರೆಟ್ ಗುಣಮಟ್ಟದ ವಜ್ರವನ್ನು ಲಭ್ಯವಾಗಿದೆ. ಇದನ್ನು ಅವರು ವಜ್ರದ ಕಚೇರಿಗೆ ನೀಡಿದ್ದಾರೆ. ಸುಮಾರು 40 ಲಕ್ಷ ರೂ ಮೌಲ್ಯದ ವಜ್ರ ಎಂದು ಅಂದಾಜಿಸಲಾಗಿದೆ. ಮುಂಬರುವ ವಜ್ರದ ಹರಾಜಿನಲ್ಲಿ ಇದನ್ನು ಇರಿಸಲಾಗುತ್ತದೆ. ಇದರಿಂದ ಬಂದ ಹಣದಿಂದ ಬಡಮಕ್ಕಳಿಗೆ ಸಹಾಯ ಮಾಡುತ್ತೇನೆ ಎಂದು ರಾಣಾ ಪ್ರತಾಪ್​ ಹೇಳಿದ್ದಾರೆ.
Last Updated : Feb 3, 2023, 8:28 PM IST

ABOUT THE AUTHOR

...view details