ಬಳ್ಳಾರಿ ಉತ್ಸವ : ಸಖತ್ ಸ್ಟೆಪ್ ಹಾಕಿದ ಶ್ರೀರಾಮುಲು, ಸೋಮಶೇಖರ್ ರೆಡ್ಡಿ - ಈಟಿವಿ ಭಾರತ ಕನ್ನಡ
ಬಳ್ಳಾರಿ: ನಗರದ ಮುನ್ಸಿಪಲ್ ಮೈದಾನದಲ್ಲಿ ಶನಿವಾರ ತಡರಾತ್ರಿ ನಡೆದ ಬಳ್ಳಾರಿ ಜಿಲ್ಲಾ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ರಸಮಂಜರಿ ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು ಮುಖ್ಯ ವೇದಿಕೆಯಲ್ಲಿ ಅರ್ಜುನ್ ಜನ್ಯ ಜೊತೆ ಹೆಜ್ಜೆ ಹಾಕಿದರು. ಅಲ್ಲದೆ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಕೂಡಾ ನೃತ್ಯ ಮಾಡಿ ನೆರೆದಿದ್ದ ವೀಕ್ಷಕರನ್ನು ರಂಜಿಸಿದರು.
ಇದೇ ವೇಳೆ ರಸಮಂಜರಿಯಲ್ಲಿ ಹಾಡಲಾದ ವಿಲನ್ ಚಿತ್ರದ ಟಿಕ್ ಟಿಕ್ ಹಾಡಿಗೆ ಐಎಎಸ್, ಕೆಎಎಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ನೃತ್ಯ ಮಾಡಿದರು. ಹಾಡಿಗೆ ಬಳ್ಳಾರಿ ಜಿಲ್ಲಾ ಉತ್ಸವದ ಉಸ್ತುವಾರಿ ಹೊತ್ತಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಪಾಲಿಕೆ ಆಯುಕ್ತ ರುದ್ರೇಶ್, ಸಹಾಯಕ ಆಯುಕ್ತ ಹೇಮಂತ, ಎಎಸ್ಪಿ ನಟರಾಜ್, ತಹಶೀಲ್ದಾರ್ ವಿಶ್ವನಾಥ್, ಎಡಿಸಿ ಮಂಜುನಾಥ್ ಅವರನ್ನೊಳಗೊಂಡಂತೆ ವಿವಿಧ ಅಧಿಕಾರಿಗಳು ಕುಣಿದು ಕುಪ್ಪಳಿಸಿದರು.
ಇದನ್ನೂ ನೋಡಿ :ಹುಡುಗಿಯರ ಹಾಸ್ಟೆಲ್ಗೆ ನುಗ್ಗಿದ ಖದೀಮ.. ಪರಾರಿಯಾಗುವಾಗ ಬಾವಿಗೆ ಬಿದ್ದು ಫಜೀತಿ - ವಿಡಿಯೋ