ಕರ್ನಾಟಕ

karnataka

ಬಳ್ಳಾರಿಯಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ

ETV Bharat / videos

ಬಳ್ಳಾರಿಯಲ್ಲಿ ರಾಜ್ಯೋತ್ಸವ: ಏಕಶಿಲಾ ಬೆಟ್ಟದ ಮೇಲೆ ಹಾರಾಡಿದ 68 ಅಡಿ ಉದ್ದದ ಕರ್ನಾಟಕ ಧ್ವಜ - ​ ETV Bharat Karnataka

By ETV Bharat Karnataka Team

Published : Nov 1, 2023, 1:28 PM IST

ಬಳ್ಳಾರಿ:ಜಿಲ್ಲೆಯ ವಿವಿಧೆಡೆ ಇಂದು 68ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ಮುನಿಸಿಪಲ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ಮಾಡಿದರು. ಬಳಿಕ ಪೊಲೀಸ್ ಪಡೆಯಿಂದ ಗೌರವಂದನೆ ಸ್ವೀಕರಿಸಿದರು.

ಹಂಪಿಯಿಂದ ಕನ್ನಡಪರ ಸಂಘಟನೆಗಳು ತಂದಿದ್ದ ಕನ್ನಡ ಜ್ಯೋತಿ ಹಸ್ತಾಂತರದ ಬಳಿಕ ಸಚಿವ ನಾಗೇಂದ್ರ ರಾಜ್ಯೋತ್ಸವದ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ನಗರ ಶಾಸಕ ನಾರಾ ಭರತ ರೆಡ್ಡಿ, ಮಹಾಪೌರರಾದ ಡಿ.ತ್ರಿವೇಣಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್.ಎನ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ ಹಾಗು ವಿವಿಧ ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಹಾರಾಡಿದ 68 ಅಡಿ ಉದ್ದದ ಕನ್ನಡ ಧ್ವಜ:ಕನ್ನಡ ಪರ ಸಂಘಟನೆಗಳು ಪ್ರತೀ ವರ್ಷವೂ ನಗರದಲ್ಲಿರುವ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಏಕಶಿಲಾ ಬೆಟ್ಟದ ಮೇಲೆ ಕನ್ನಡ ಬಾವುಟ ಹಾರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ವರ್ಷವೂ ಕೂಡ ಕಾರ್ಯಕರ್ತರು ಹಾಗೂ ನಗರ ಶಾಸಕ ನಾರಾ ಭರತ ರೆಡ್ಡಿ ಜೊತೆಗೂಡಿ 68 ಅಡಿಯ ಕನ್ನಡ ಬಾವುಟ ಹಾರಿಸಿ, ರಾಷ್ಟ್ರಗೀತೆ ಹಾಡಿದರು.   

ಇದನ್ನೂ ಓದಿ:ರಾಯಚೂರಿನಲ್ಲಿ ರಾಜ್ಯೋತ್ಸವ: ಸಚಿವ ಡಾ.ಶರಣಪ್ರಕಾಶ್ ಪಾಟೀಲರಿಂದ ಧ್ವಜಾರೋಹಣ

ABOUT THE AUTHOR

...view details