ದೋಣಿಯಲ್ಲಿ ಕುಳಿತು ಯೋಗ ಮಾಡಿದ ಐಟಿಬಿಟಿ ಸೈನಿಕರು! - ಅಂತರಾಷ್ಟ್ರೀಯ ಯೋಗ ದಿನ
ಇಂದು ಅಂತಾರಾಷ್ಟ್ರೀಯ ಯೋಗ ದಿನ. ಪ್ರಪಂಚದಾದ್ಯಂತ ಯೋಗಾಭ್ಯಾಸ ಮಾಡಲಾಗುತ್ತಿದೆ. ಐಟಿಬಿಪಿಯ ಹಿಮ ವೀರರು ಅಂದರೆ ಇಂಡೋ - ಟಿಬೆಟಿಯನ್ ಬಾರ್ಡರ್ ಪೊಲೀಸರು ತೆಹ್ರಿ ಸರೋವರದಲ್ಲಿ ದೋಣಿಯಲ್ಲಿ ಕುಳಿತು ಯೋಗ ಮಾಡಿ ಗಮನ ಸೆಳೆದರು. ITBP ಸೈನಿಕರು ಉತ್ತರಾಖಂಡದ 16,000 ಅಡಿ ಎತ್ತರದ ಹಿಮಾಲಯ ಪ್ರದೇಶದ ಶೂನ್ಯ ತಾಪಮಾನದಲ್ಲಿ ಯೋಗ ಪ್ರದರ್ಶಿಸಿದರು. ಇದಲ್ಲದೇ ಹಿಮ ವೀರರು 14,500 ಅಡಿ ಎತ್ತರದಲ್ಲಿ ಬೆಟ್ಟದ ಮೇಲೆಯೂ ಯೋಗ ಮಾಡಿದರು. ಇದೀಗ ತೆಹ್ರಿ ವಾಟರ್ ಸ್ಪೋರ್ಟ್ಸ್ ಅಡ್ವೆಂಚರ್ ಇನ್‌ಸ್ಟಿಟ್ಯೂಟ್‌ನಲ್ಲಿ ಸೈನಿಕರು ಯೋಗ ಮಾಡಿ ಗಮನ ಸೆಳೆದರು.
Last Updated : Feb 3, 2023, 8:24 PM IST