ಗುರುಮಠಕಲ್ನಲ್ಲಿ ಶ್ರೀ ಅಂಬಾ ಭವಾನಿ ದೇವಿ ಮೂರ್ತಿ ಪ್ರತಿಷ್ಠಾಪನೆ - ಈಟಿವಿ ಭಾರತ ಕನ್ನಡ ನ್ಯೂಸ್
ಯಾದಗಿರಿ : ಇಲ್ಲಿನ ಗುರುಮಠಕಲ್ ಪಟ್ಟಣದಲ್ಲಿ ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ. ಇಲ್ಲಿನ ನಾರಾಯಣಪುರ ಓಣಿಯಲ್ಲಿ ಕಳೆದ 6 ವರ್ಷಗಳಿಂದ ಸೋಮವಂಶಿಯ ಸಹಸ್ರಾರ್ಜುನ್ ಕ್ಷತ್ರಿಯ ಸಮಾಜವು ಇಲ್ಲಿನ ಗಣೇಶ ಮಂದಿರದಲ್ಲಿ ಶ್ರೀ ಅಂಬಾ ಭವಾನಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ನವರಾತ್ರಿ ಉತ್ಸವ ಆಚರಿಸಿಕೊಂಡು ಬರುತ್ತಿದೆ. ಅದರಂತೆ ಈ ವರ್ಷವೂ ಬಹು ವಿಜೃಂಭಣೆಯಿಂದ ನವರಾತ್ರಿ ಉತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ನಿತ್ಯವೂ ಮಂದಿರದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪೂಜೆಯ ಬಳಿಕ ನೆರೆದ ಮಹಿಳೆಯರು ಹಾಗೂ ಮಕ್ಕಳು ದಾಂಡಿಯಾ ಹಾಗೂ ಗರ್ಬಾ ನೃತ್ಯವನ್ನು ಮಾಡುತ್ತಾರೆ. ಪೂಜೆಯ ಜೊತೆಗೆ ಒಂಬತ್ತು ದಿನಗಳಲ್ಲಿ ಡಾಂಡಿಯಾ ಹಾಗೂ ಗರ್ಭಾ ನೃತ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಪಟ್ಟಣದ ವಿವಿಧ ಭಾಗದಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ.
Last Updated : Feb 3, 2023, 8:28 PM IST
TAGGED:
ದಾಂಡಿಯಾ ಹಾಗೂ ಗರ್ಬಾ ನೃತ್ಯ