International Yoga Day 2023: ಲಡಾಖ್ನ ಪ್ಯಾಂಗೊಂಗ್ನಲ್ಲಿ ಭಾರತೀಯ ಸೇನಾ ಸಿಬ್ಬಂದಿಯಿಂದ ಯೋಗ ಪ್ರದರ್ಶನ
ನವದೆಹಲಿ:ಜಗತ್ತಿನಾದ್ಯಂತ ರಾಷ್ಟ್ರಗಳು 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು 180ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳೊಂದಿಗೆ ವಿಶ್ವಸಂಸ್ಥೆ (ಯುಎನ್) ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆಯ ನೇತೃತ್ವ ವಹಿಸಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 5.30ಕ್ಕೆ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಯೋಗ ದಿನಾಚರಣೆ ನಡೆಯಲಿದೆ. ಈಗಾಗಲೇ ದೇಶಾದ್ಯಂತ ಯೋಗ ದಿನಾಚರಣೆ ಆರಂಭವಾಗಿದ್ದು, ಭಾರತೀಯ ಸೇನೆಯ ಸಿಬ್ಬಂದಿ ವಿವಿಧೆಡೆ ಯೋಗ ಪ್ರದರ್ಶನ ನೀಡಿದ್ದಾರೆ.
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು 9ನೇ ಅಂತಾರಾಷ್ಟ್ರೀಯ ಯೋಗದಿನ ಹಿನ್ನೆಲೆ ಯೋಗ ಪ್ರದರ್ಶಿಸಿದರು. ಭಾರತೀಯ ಸೇನೆಯ ಯೋಧರು ರಾಜಸ್ಥಾನ, ಲಡಾಖ್ನ ಪ್ಯಾಂಗೊಂಗ್ ತ್ಸೋ ಹಾಗೂ ಸಿಕ್ಕಿಂನಲ್ಲಿ ಯೋಗ ಪ್ರದರ್ಶನ ಮಾಡಿದರು. ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿಯೂ ಭಾರತೀಯ ಸೇನೆಯ ಸಿಬ್ಬಂದಿ ಯೋಗ ಪ್ರದರ್ಶನ ನೀಡಿದ್ದಾರೆ. ಇನ್ನು ರಾಮೇಶ್ವರಂನ ಯೋಗ ಪಟುಗಳು 9ನೇ ಅಂತಾರಾಷ್ಟ್ರೀಯ ಯೋಗದಿನವನ್ನು ಗುರುತಿಸಲು ಜಲ ಯೋಗವನ್ನು ಪ್ರದರ್ಶಿಸಿದರು. ಬಿಎಸ್ಎಫ್ ಅಧಿಕಾರಿಗಳು ಮತ್ತು ಯೋಧರು ಜಮ್ಮುವಿನ ಆರ್ ಎಸ್ ಪುರ ಸೆಕ್ಟರ್‌ನಲ್ಲಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ ಯೋಗ ಪ್ರದರ್ಶಿಸಿದರು
ಅಂತಾರಾಷ್ಟ್ರೀಯ ಯೋಗ ದಿನ 2023: 'ವಸುಧೈವ ಕುಟುಂಬಕಂ ಗಾಗಿ ಯೋಗ' ಇದು ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯ ವಾಕ್ಯ. 'ವಸುಧೈವ ಕುಟುಂಬಕಂ' ಎಂದರೆ, ಜಗತ್ತನ್ನು ಒಂದು ದೊಡ್ಡ ಕುಟುಂಬವಾಗಿ ನೋಡುವ ತತ್ವವಾಗಿದೆ. 'ಮನ್ ಕಿ ಬಾತ್'ನ 102 ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇದನ್ನು ಘೋಷಿಸಿದ್ದರು.
ಯೋಗದ ಆರೋಗ್ಯ ಪ್ರಯೋಜನಗಳು:
- ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
- ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.
- ಒತ್ತಡವನ್ನು ಕಡಿಮೆ ಮಾಡುತ್ತದೆ.
- ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
- ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯಕ.
- ಶಾಂತತೆಯನ್ನು ಉತ್ತೇಜಿಸುತ್ತದೆ
ಇದನ್ನೂ ಓದಿ:International Yoga Day: ವಿಡಿಯೋ ಸಂದೇಶದ ಮೂಲಕ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ