ಭಾರತ vs ಪಾಕಿಸ್ತಾನ ಪಂದ್ಯ: 15 ರಿಂದ 25 ಸಾವಿರ ರೂ. ನೀಡಿ ಬ್ಲ್ಯಾಕ್ ಟಿಕೆಟ್ ಖರೀದಿಸಿದ ಪ್ರೇಕ್ಷಕರು.. - ಕ್ರಿಕೆಟ್ ಅಭಿಮಾನಿಗಳಿಗೆ ಕ್ರೇಜ್
Published : Oct 14, 2023, 11:52 AM IST
ಅಹಮದಾಬಾದ್ (ಗುಜರಾತ್): ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ಇಂದು (ಶನಿವಾರ) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆಯಿಂದಲೇ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಬಳಿಯಲ್ಲಿ ಸಾವಿರಾರು ಜನ ಸೇರಿದ್ದರು.
ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಕ್ರೇಜ್ ಹೆಚ್ಚಾಗಿದೆ. ಪಂದ್ಯ ವೀಕ್ಷಿಸಲು ಜನರು ಬ್ಲ್ಯಾಕ್ ಟಿಕೆಟ್‌ಗಳನ್ನು ಖರೀದಿ ಮಾಡಿದ್ದಾರೆ. ಒಡಿಶಾ ಮತ್ತು ರಾಜಸ್ಥಾನದಿಂದ ಬಂದ ಪ್ರೇಕ್ಷಕರು 15 ರಿಂದ 25 ಸಾವಿರ ರೂಪಾಯಿ ನೀಡಿ, ಬ್ಲ್ಯಾಕ್ ಟಿಕೆಟ್ ಖರೀದಿಸಿ ಕ್ರೀಡಾಂಗಣಕ್ಕೆ ಬಂದಿದ್ದಾರೆ.
ಒಡಿಶಾದ ಸಿಮರ್ ಸಲೂಜಾ ಮತ್ತು ಆಕೆಯ ಸ್ನೇಹಿತನೊಂದಿಗೆ ಪಂದ್ಯ ವೀಕ್ಷಿಸಲು ಬಂದಿದ್ದ ವೇಳೆ ಈಟಿವಿ ಭಾರತ್ ಜೊತೆಗೆ ಮಾತನಾಡಿ, ನಾವು ಒಡಿಶಾದಿಂದ ಬಂದಿದ್ದೇವೆ. ಟಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನಿಸಿದ್ದೇವೆ. ಆದರೆ ಟಿಕೆಟ್ ಸಿಗಲಿಲ್ಲ. ಇದರಿಂದ 25,000 ರೂಪಾಯಿಗೆ ಟಿಕೆಟ್ ಖರೀದಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ರಾಜಸ್ಥಾನದ ಯುವಕನೊಬ್ಬ ಈಟಿವಿ ಭಾರತ್ ಜೊತೆಗೆ ಮಾತನಾಡಿ, ''ನಾನು ಹತ್ತು ಗಂಟೆಗಳ ಹಿಂದೆ, ರಾಜಸ್ಥಾನದಿಂದ ಪ್ರಯಾಣ ಆರಂಭಿಸಿದ್ದೆ. ರೈಲಿನಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ನಾನು ಸ್ಲೀಪರ್ ಕೋಚ್‌ನ ಬಸ್‌ನಲ್ಲಿ ಅಹಮದಾಬಾದ್‌ಗೆ ಬರಬೇಕಾಯಿತು. ಈ ಟಿಕೆಟ್ ಅನ್ನು 15,000 ರೂಪಾಯಿ ನೀಡಿ ಖರೀದಿಸಿದ್ದೇನೆ. ನನ್ನ ಇಡೀ ಗುಂಪು ಬ್ಲ್ಯಾಕ್ ಟಿಕೆಟ್ ಖರೀದಿಸಿದೆ'' ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಭಾರತ ಪಾಕಿಸ್ತಾನ ಪಂದ್ಯ: ಅಹಮದಾಬಾದ್ ತಲುಪಿದ ಸಚಿನ್ ತೆಂಡೂಲ್ಕರ್, ಅನುಷ್ಕಾ ಶರ್ಮಾ, ಅರಿಜಿತ್ ಸಿಂಗ್ - ವಿಡಿಯೋ!