ಕರ್ನಾಟಕ

karnataka

ನದಿಯಲ್ಲಿ ಮುಳುಗಿ ನಾಲ್ವರು ಯುವಕರ ಸಾವು

ETV Bharat / videos

ನದಿಯಲ್ಲಿ ಮುಳುಗಿ ನಾಲ್ವರು ಯುವಕರ ಸಾವು - ನದಿಯಲ್ಲಿ ಮುಳುಗಿ ಯುವಕರ ಸಾವು

By

Published : Mar 11, 2023, 10:12 PM IST

ಮುಂಬೈ (ಮಹಾರಾಷ್ಟ್ರ):ಗೋದಾವರಿ ನದಿಯಲ್ಲಿ ಮುಳುಗಿ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ ಸಮೀಪ ನಡೆದಿದೆ. ಮೃತರನ್ನು ಬಾಬಾಸಾಹೇಬ್ ಅಶೋಕ್ ಗೋರ್ (35), ನಾಗೇಶ್ ದಿಲೀಪ್ ಗೋರ್ (20), ಅಕ್ಷಯ್ ಭಾಗಿನಾಥ್ ಗೋರ್ (20) ಹಾಗೂ ಶಂಕರ ಪರಸ್ನಾಥ್ ಘೋಡ್ಕೆ (22) ಎಂದು ಗುರುತಿಸಲಾಗಿದೆ.

ಮೃತರ ನಾಲ್ವರು ಯುವಕರು ಕೂಡ ವೈಜಾಪುರ ತಾಲೂಕಿನ ಪಾಲ್ಖೇಡ್ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಇವರು ಶನಿವಾರ 4 ಗಂಟೆ ಸುಮಾರಿಗೆ ಛತ್ರಪತಿ ಸಂಭಾಜಿ ನಗರದ ಪುಣೆ ಹೆದ್ದಾರಿ ಬಳಿಯ ಕಾಯಗಾಂವ್ ತೋಕೆ ಸಮೀಪದ ಸಿದ್ಧೇಶ್ವರ ದೇವಸ್ಥಾನದ ಬಳಿಯಿರುವ ಗೋದಾವರಿ ನದಿಗೆ ಇಳಿದಿದ್ದರು. ಈ ವೇಳೆ ನದಿ ನೀರಿನ ಆಳ ತಿಳಿಯದೇ ನಾಲ್ವರು ಕೂಡ ಮುಳುಗಿದ್ದಾರೆ ಎಂದು ತಿಳಿದು ಬಂದಿದೆ. 

ಈ ವಿಷಯ ತಿಳಿದ ಸ್ಥಳೀಯರು ತಕ್ಷಣವೇ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಶಂಕರ ಘೋಡ್ಕೆ ಮೃತದೇಹ ಪತ್ತೆಯಾಗಿದೆ. ಆದರೆ, ಉಳಿದ ಇನ್ನೂ ಮೂವರ ಶವಗಳು ದೊರೆತಿಲ್ಲ. ಹೀಗಾಗಿ ರಾತ್ರಿಯವರೆಗೆ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ. 

ಇದನ್ನೂ ಓದಿ:ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಎಚ್ಚರ: ಮನೆಗಳಿಗೆ ಕನ್ನ ಹಾಕಿದ್ದ ನೇಪಾಳಿ‌ ಕಳ್ಳರ ಬಂಧನ

ABOUT THE AUTHOR

...view details