'ಶಾಶ್ವತವಾಗಿ ಜೈಲಿಗೆ ಹೋದ್ರೂ ಅಚ್ಚರಿಯಿಲ್ಲ' ಎಂಬ ಹೆಚ್‌ಡಿಕೆ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ ಇದು: ವಿಡಿಯೋ - ETV Bharat Karnataka
Published : Oct 9, 2023, 9:37 PM IST
ಬೆಂಗಳೂರು : ಈ ಹಿಂದೆ ಏನು ಮಾಡಿದ್ದರು, ಮುಂದೇನು ಮಾಡಲು ಹೊರಟಿದ್ದಾರೆ ಎಂಬುದನ್ನು ತಮ್ಮ ಹೇಳಿಕೆಯ ಮೂಲಕ ತಿಳಿಸಿದ್ದಾರೆ ಅಷ್ಟೇ ಎಂದು ಹೆಚ್.ಡಿ.ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ಕೊಟ್ಟರು.
ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಮತ್ತೆ ಶಾಶ್ವತವಾಗಿ ಹೋದರೂ ಅಚ್ಚರಿ ಇಲ್ಲ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ತಮ್ಮ ಪ್ಲಾನ್ ಏನಿದೆ ಎಂಬುದನ್ನು ಹೇಳಿದ್ದಾರೆ. ಅವರು ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ತಿಳಿಸಿದ್ದಾರೆ. ಈ ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದಾಗ ನನ್ನ ತಂಗಿ, ತಮ್ಮ ಹಾಗೂ ನನ್ನ ಹೆಂಡತಿ ಮೇಲೆ ಕೇಸ್ ಹಾಕಿದ್ದನ್ನು ಈಗ ನೆನಪಿಸಿಕೊಂಡಿದ್ದಾರೆ. ಈ ವಿಚಾರವಾಗಿ ಮುಂದೆ ಮಾತನಾಡೋಣ ಎಂದು ತಿಳಿಸಿದರು.
ಮೈತ್ರಿ ಸರ್ಕಾರ ಬೀಳಲು ಡಿ.ಕೆ.ಶಿವಕುಮಾರ್ ಅವರೇ ಕಾರಣ. ಈ ಸರಕಾರ ಶೀಘ್ರ ಉರುಳಿ ಹೋಗುತ್ತದೆ ಎಂಬ ಕುಮಾರಸ್ವಾಮಿ ಮಾತಿಗೆ, ಕುಮಾರಸ್ವಾಮಿ ಬಹಳ ದೊಡ್ಡವರು. ಅವರ ನುಡಿಮುತ್ತುಗಳೇನಿವೆಯೋ ಅವರು ಹೇಳಿದ್ದಾರೆ. ಈ ಕುರಿತು ಸಂಪೂರ್ಣವಾಗಿ ಮಾಹಿತಿ ಪಡೆದ ನಂತರ ಪ್ರತಿಕ್ರಿಯಿಸುತ್ತೇನೆ ಎಂದರು.
ಇದನ್ನೂ ಓದಿ :ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿಚಾರ ಮುಗಿದು ಹೋದ ಕಥೆ ಎಂದ ಶಾಮನೂರು ಶಿವಶಂಕರಪ್ಪ