ಕರ್ನಾಟಕ

karnataka

ETV Bharat / videos

ದತ್ತಜಯಂತಿ ಸಂಭ್ರಮ.. ಕೇಸರಿಮಯವಾದ ಕಾಫಿನಾಡು - IG Road Kamadhenu Ganapati Temple

By

Published : Dec 6, 2022, 1:29 PM IST

Updated : Feb 3, 2023, 8:34 PM IST

ಕಾಫಿನಾಡಲ್ಲಿ ದತ್ತಜಯಂತಿ ಸಂಭ್ರಮ ಕಳೆಗಟ್ಟಿದೆ. ಚಿಕ್ಕಮಗಳೂರಿನಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ ಆರಂಭವಾಗಿದೆ. ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಸಂಕೀರ್ತನ ಯಾತ್ರೆ 5 ಸಾವಿರಕ್ಕೂ ಅಧಿಕ ಮಹಿಳೆಯರಿಂದ ನಡೆಯುತ್ತಿದೆ. ಐ.ಜಿ.ರಸ್ತೆ ಮೂಲಕ ಕಾಮಧೇನು ಗಣಪತಿ ದೇವಸ್ಥಾನದವರೆಗೆ ಮೆರವಣಿಗೆ ಸಾಗಲಿದ್ದು, ಮೆರವಣಿಗೆ ಬಳಿಕ ದತ್ತಪೀಠಕ್ಕೆ ಮಹಿಳೆಯರು ತೆರಳಲಿದ್ದಾರೆ. ನಂತರ ದತ್ತಪೀಠದಲ್ಲಿ ಹೋಮ-ಹವನವನ್ನು ಮಹಿಳೆಯರು ನಡೆಸಲಿದ್ದಾರೆ. ನಗರ ಹಾಗೂ ದತ್ತಪೀಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕೇಸರಿ ಸೀರೆಯುಟ್ಟು ಮೆರವಣಿಗೆ ಹೊರಟ ಮಹಿಳೆಯರಿಂದಾಗಿ ಚಿಕ್ಕಮಗಳೂರು ನಗರ ಸಂಪೂರ್ಣ ಕೇಸರಿಮಯವಾಗಿ ಕಂಗೊಳಿಸುತ್ತಿದೆ.
Last Updated : Feb 3, 2023, 8:34 PM IST

ABOUT THE AUTHOR

...view details