ರಾಯಚೂರಿನ ಈ ಬ್ಯಾಂಕ್ ಶಾಖೆಯಲ್ಲಿ 3ನೇ ಬಾರಿ ಕಳ್ಳತನ ಯತ್ನ.. ಖದೀಮರಿಗೆ ಸಿಕ್ಕಿದ್ದೇನು? - cctv footages of bank robbery in raichur
ರಾಯಚೂರು: ಲಿಂಗಸೂಗೂರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮತ್ತೊಮ್ಮೆ ಕಳ್ಳತನ ಯತ್ನ ನಡೆದಿದೆ. ಒಂದೇ ವರ್ಷದಲ್ಲಿ ಸತತ ಮೂರನೇ ಬಾರಿಗೆ ಖದೀಮರು ಬ್ಯಾಂಕ್ ಶಾಖೆಗೆ ನುಗ್ಗಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ ದೃಶ್ಯಗಳು ಸೆರೆಯಾಗಿವೆ. ಬ್ಯಾಂಕ್ನಲ್ಲಿನ ವಾಶ್ ರೂಂನ ಕಿಟಕಿ ಒಡೆದು ಕಳ್ಳರು ನುಗ್ಗಿದ್ದಾರೆ. ಒಳಗಡೆ ಹೋಗಿ ಸಿಸಿ ಕ್ಯಾಮರಾ ಕಿತ್ತೆಸೆದಿದ್ದಾರೆ. ಬ್ಯಾಂಕ್ನಲ್ಲಿ ಏನೂ ಸಿಗದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಆಗಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:24 PM IST