ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿಯಲ್ಲಿ ಜೆಸಿಬಿಗೆ ಬೈಕ್ ಡಿಕ್ಕಿ, ಸವಾರ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ETV Bharath Kannada news

By

Published : Dec 21, 2022, 1:29 PM IST

Updated : Feb 3, 2023, 8:36 PM IST

ಹುಬ್ಬಳ್ಳಿ: ಅತೀ ವೇಗವಾಗಿ ಚಲಿಸುತಿದ್ದ ಬೈಕ್, ಜೆಸಿಬಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ನಗರದ ಕಾರವಾರ ರಸ್ತೆಯ ಇರ್ಫಾನ್ ಐಸ್ ಫ್ಯಾಕ್ಟರಿ ಮುಂದೆ ನಡೆದಿದ್ದು, ಡಿಕ್ಕಿ ಹೊಡೆತಕ್ಕೆ ಬೈಕ್ ಸಂಪೂರ್ಣವಾಗಿ ಸುಟ್ಟ ಕರಕಲಾಗಿದೆ. ‌ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತರು ಧೀನಬಂಧು‌ ಕಾಲೋನಿಯ ಆದೀಲ್ ಸಿಖಂದರ್ (18) ಎಂದು ಗುರುತಿಸಲಾಗಿದೆ. ಜಾವೇದ ಶೇಖ ಮತ್ತು ಖಲಂದರ್ ಶೇಖಗೆ ಗಂಭೀರ ಗಾಯಗಳಾಗಿದ್ದು,‌ ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
Last Updated : Feb 3, 2023, 8:36 PM IST

ABOUT THE AUTHOR

...view details