ಕೊರೆವ ಚಳಿ ಮೀರಿ ಬರಿ ಮೈಯಲ್ಲಿ ಭಾರತ್ ಜೋಡೋ ಯಾತ್ರೆ: ವಿಡಿಯೋ - ಹರಿಯಾಣದಲ್ಲಿ ಭಾರತ್ ಜೋಡೋ ಯಾತ್ರೆ
ಹರಿಯಾಣ: ಉತ್ತರ ಭಾರತದಲ್ಲಿ ಚಳಿ ಮೈ ಕೊರೆಯುತ್ತಿದೆ. ಹೊರಬಂದರೆ ದೇಹ ಗಡಗಡ ನಡುಗುತ್ತದೆ. ಬೆಚ್ಚನೆಯ ಹೊದಿಕೆ, ಬೆಂಕಿ ಕಾಯಿಸುತ್ತಾ ಚಳಿಗೆ ಅಲ್ಲಿನ ಜನರು ತಡೆಯುತ್ತಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಚಳಿ ಲೆಕ್ಕಕ್ಕೇ ಇಲ್ಲವಾಗಿದೆಯೇನೋ?. ಹರಿಯಾಣದ ಕರ್ನಾಲ್ನಲ್ಲಿ ಸಾಗುತ್ತಿರುವ ಯಾತ್ರೆಗೆ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಬೆಂಬಲ ನೀಡಿದ್ದು, ಚಳಿ ಇದ್ದರೂ ಬರಿ ಮೈಯಲ್ಲಿ ಭಾಗವಹಿಸಿದ್ದಾರೆ. ವಾಹನದ ಮೇಲೆ ನಿಂತು ಅಂಗಿ ತೆಗೆದು ನೃತ್ಯ ಮಾಡುತ್ತಾ ಸಾಗುತ್ತಿರುವ ಯಾತ್ರೆಯನ್ನು ಹುರಿದುಂಬಿಸಿದ್ದಾರೆ. ತೀವ್ರ ಚಳಿಯಲ್ಲೂ ರಾಹುಲ್ರ ಯಾತ್ರೆ ಬಿಸಿ ಏರಿಸಿದಂತಾಗಿದೆ.
Last Updated : Feb 3, 2023, 8:38 PM IST