ಟಿ. ನರಸೀಪುರ ಪಟ್ಟಣದ ಬಡಾವಣೆಯಲ್ಲಿ ಕರಡಿ ಪ್ರತ್ಯಕ್ಷ.. ಜನರಲ್ಲಿ ಆತಂಕ - Bear found in Narasipura
Published : Dec 27, 2023, 2:21 PM IST
ಮೈಸೂರು : ಇಂದು ಬೆಳಗಿನ ಜಾವ ಟಿ.ನರಸೀಪುರ ಪಟ್ಟಣದ ಬಡಾವಣೆಗಳಲ್ಲಿ ಕರಡಿ ಓಡಾಟ ನಡೆಸಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ಕರಡಿ ಸೆರೆಗೆ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಪ್ರತಿನಿತ್ಯ ಹುಲಿ, ಚಿರತೆ, ಆನೆಗಳ ಹಾವಳಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಆದರೆ, ಈಗ ಪಟ್ಟಣಕ್ಕೆ ಕರಡಿ ಆಗಮಿಸಿದ್ದು, ಅರಣ್ಯ ಇಲಾಖೆ ಇದನ್ನು ಖಚಿತ ಪಡಿಸಿದೆ. ಇಂದು ಬೆಳಗಿನ ಜಾವ ಟಿ.ನರಸೀಪುರ ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನ, ಕಡ್ಲೆ ರಂಗಮ್ಮ ಬೀದಿ, ಶ್ರೀ ರಾಂಪುರ ಬಡಾವಣೆ ಸೇರಿದಂತೆ ಹಲವು ಕಡೆ ಕರಡಿ ಓಡಾಟ ನಡೆಸಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕರಡಿ ಓಡಾಟದ ಬಗ್ಗೆ ಸ್ಥಳೀಯ ಸಿಸಿಟಿವಿಗಳಲ್ಲಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆಯ ಮಾಹಿತಿ ನೀಡಿ, ಕರಡಿ ಸೆರೆಗೆ ಕಾರ್ಯಾಚರಣೆ ನಡೆಸುವುದಾಗಿ ತಾಲೂಕು ಅರಣ್ಯಾಧಿಕಾರಿ ಮಂಜುನಾಥ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಶಿವಮೊಗ್ಗ : ನಾಗಸಮುದ್ರ ಗ್ರಾಮದಲ್ಲಿ ಕರಡಿ ಓಡಾಟ