ಅಮೃತಸರದ ಸಚ್‌ಖಂಡ್ ಶ್ರೀ ಹರ್ಮಂದಿರ್ ಸಾಹಿಬ್ನಲ್ಲಿ 'ಬಂದಿ ಚೋರ್ ದಿವಸ್' ಸಂಭ್ರಮ - ಅಮೃತಸರದ ಗೋಲ್ಡನ್ ಟೆಂಪಲ್
Published : Nov 12, 2023, 5:19 PM IST
ಅಮೃತಸರ (ಪಂಜಾಬ್) :ದೇಶಾದ್ಯಂತ ದೀಪಾವಳಿ ಸಂಭ್ರಮ ಜೋರಾಗಿದೆ. ಅಮೃತಸರದ ಗೋಲ್ಡನ್ ಟೆಂಪಲ್ನಲ್ಲಿ ಬೆಳಕಿನ ಹಬ್ಬದ ಜೊತೆಗೆ ಸಚ್‌ಖಂಡ್ ಶ್ರೀ ಹರ್ಮಂದಿರ್ ಸಾಹಿಬ್ನಲ್ಲಿ 'ಬಂದಿ ಚೋರ್ ದಿವಸ್' ಅನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಲಕ್ಷಾಂತರ ಜನರು ಆಗಮಿಸಿ, ತುಪ್ಪದ ದೀಪ ಬೆಳಗಿಸಿದರು. ದೇಶ, ವಿದೇಶದ ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸಿ ಪೂಜೆ ಸಲ್ಲಿಸಿದರು. ರಾತ್ರಿ ವೇಳೆ ಪಟಾಕಿ ಸಿಡಿಸಿ, ಇಲ್ಲಿನ ಜನರು ಅದ್ಧೂರಿಯಾಗಿ ಹಬ್ಬವನ್ನು ಸಂಭ್ರಮಿಸುತ್ತಾರೆ.
ಇಲ್ಲಿ ದೀಪಾವಳಿಗೆ ಹೆಚ್ಚಿನ ಮಹತ್ವವಿದೆ. ಏಕೆಂದರೆ, 'ಬಂದಿ ಚೋರ್ ದಿವಸ್' ಆಚರಿಸುವುದರ ಹಿಂದೆ ಇತಿಹಾಸವಿದೆ. ಶ್ರೀ ಗುರು ಹರಗೋಬಿಂದ್ ಸಾಹಿಬ್ ಅವರು ಗ್ವಾಲಿಯರ್ ಕೋಟೆಯಿಂದ ಬಿಡುಗಡೆಯಾದ ದಿನದಂದು ಇತರೆ 52 ರಾಜರು ಕೂಡ ಸೆರೆ ಮನೆ ವಾಸದಿಂದ ಬಿಡುಗಡೆಯಾಗಿದ್ದರು. ಹೀಗಾಗಿ ಇಂದಿಗೂ ಜನರು ಈ ದಿನವನ್ನು 'ಬಂದಿ ಚೋರ್ ದಿವಸ್' ಎಂದು ಆಚರಿಸಿಕೊಂಡು ಬಂದಿದ್ದಾರೆ. ಈ ದಿನದಂದು ಎಲ್ಲರೂ ದರ್ಬಾರ್ ಸಾಹೇಬರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಾರೆ.
ಇದನ್ನೂ ಓದಿ :ದೀಪಾವಳಿ ಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ತರಲಿ: ದೇಶದ ಜನತೆಗೆ ಶುಭ ಕೋರಿದ ಮೋದಿ