ಒಂದೇ ತಿಂಗಳಿನಲ್ಲಿ ನಂಜುಂಡೇಶ್ವರನಿಗೆ 2ಕೋಟಿ ಕಾಣಿಕೆ ನೀಡಿದ ಭಕ್ತಾದಿಗಳು - ಮೈಸೂರು
ಮೈಸೂರು:ಒಂದೇ ತಿಂಗಳಿನಲ್ಲಿ ನಂಜುಂಡೇಶ್ವರನಿಗೆ ಭಕ್ತಾದಿಗಳಿಂದ 2ಕೋಟಿ ರೂಪಾಯಿ ಕಾಣಿಕೆ. ಹೌದು ಮೈಸೂರಿನ ನಂಜುಂಡೇಶ್ವರ ದೇವಾಲಯಕ್ಕೆ ಕೇವಲ ಒಂದೇ ತಿಂಗಳಿನಲ್ಲಿ ಭಕ್ತರಿಂದ ಒಟ್ಟು 2 ಕೋಟಿ ರೂ ಕಾಣಿಕೆ ಬಂದಿದೆ. ನಂಜುಂಡೇಶ್ವರ ದೇವಾಲಯದ ಆವರಣದಲ್ಲಿರುವ 25 ಹುಂಡಿಗಳನ್ನು ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೆ ದೇವಸ್ಥಾನ ಸಿಬ್ಬಂದಿ ಹಾಗೂ ಬ್ಯಾಂಕ್ ಆಫ್ ಬರೋಡಾ ನಂಜನಗೂಡು ಶಾಖೆಯ ಸಿಬ್ಬಂದಿ ಎಣಿಕೆ ಮಾಡಿದ್ದು, ಹುಂಡಿಯಲ್ಲಿ 2,23,47,797 ರೂ.ಸಂಗ್ರಹವಾಗಿದೆ.
ಅಲ್ಲದೇ, 121 ಗ್ರಾಂ ಚಿನ್ನ, 10ಕೆ.ಜಿ. 100 ಗ್ರಾಂ ಬೆಳ್ಳಿ, 26 ವಿದೇಶಿ ಕರೆನ್ಸಿಯನ್ನು ಹುಂಡಿಗೆ ಹಾಕಲಾಗಿದೆ. ಒಂದೇ ತಿಂಗಳಿನಲ್ಲಿ ನಂಜುಂಡೇಶ್ವರಿಗೆ 2ಕೋಟಿ ರೂ. ಕಾಣಿಕೆ ನೀಡಿರುವುದರಿಂದ ದೇವಸ್ಥಾನದ ಆದಾಯವು ಹೆಚ್ಚಾಗಿದೆ.
ಇದನ್ನೂ ಓದಿ:ಮೈಸೂರು: ಹೋಟೆಲ್ನಲ್ಲಿ ದೋಸೆ ಸವಿದ ಪ್ರಿಯಾಂಕಾ ಗಾಂಧಿ..!
ಫೆಬ್ರವರಿ ತಿಂಗಳಲ್ಲೂ ಸಂಗ್ರಹವಾಗಿತ್ತು 1.26 ಕೋಟಿ ರೂ: ದಕ್ಷಿಣ ಕಾಶಿಯೆಂದು ಪ್ರಸಿದ್ಧವಾಗಿರುವ ನಂಜನಗೂಡಿನ ನಂಜುಂಡೇಶ್ವರನಿಗೆ ಫೆಬ್ರವರಿ ತಿಂಗಳಿನಲ್ಲಿಯೂ ಭಕ್ತಾಧಿಗಳು 1.26 ಕೋಟಿ ಕಾಣಿಕೆ ನೀಡಿದ್ದಾರೆ.
ಇದನ್ನೂ ಓದಿ: ನಂಜುಂಡೇಶ್ವರನ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಸಹಿತ ₹1.26 ಕೋಟಿ ಕಾಣಿಕೆ ಸಂಗ್ರಹ