ಕರ್ನಾಟಕ

karnataka

ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಕಡಿತ: ಉತ್ತರಾಖಂಡ​ದಲ್ಲಿ ಸಿಲುಕಿದ 15 ಮಂದಿ ಕನ್ನಡಿಗರು - ವಿಡಿಯೋ

ETV Bharat / videos

ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಕಡಿತ: ಉತ್ತರಾಖಂಡ​ದಲ್ಲಿ ಸಿಲುಕಿದ 15 ಮಂದಿ ಕನ್ನಡಿಗರು - ವಿಡಿಯೋ - etv bharat kannada

By

Published : Jul 22, 2023, 6:11 PM IST

ಬೀದರ್: ಕೇದಾರನಾಥ ಹಾಗೂ ಭದ್ರಿನಾಥ್ ಯಾತ್ರಗೆ ತರಳಿದ್ದ ರಾಜ್ಯದ 15 ಜನ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಬೀದರ್ ಜಿಲ್ಲೆಯ ಐವರು ಮತ್ತು ಕಲಬುರಗಿ ಜಿಲ್ಲೆಯ 10 ಜನ ಯಾತ್ರಿಕರು, ಭದ್ರಿನಾಥ ದೇವಸ್ಥಾನಕ್ಕೆ ಹೋಗಿ ಹರಿದ್ವಾರಕ್ಕೆ ವಾಪಸ್​ ಆಗುವ ವೇಳೆ ಮಾರ್ಗ ಮಧ್ಯದಲ್ಲಿ ಗುಡ್ಡ ಕುಸಿತ ಉಂಟಾದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡು ಮಾರ್ಗ ಮಧ್ಯೆಯೇ ಯಾತ್ರಿಕರು ಸಿಲುಕಿಕೊಂಡಿದ್ದಾರೆ. 

ಈ ಬಗ್ಗೆ ಬೀದರ್​ ಮೂಲದ ಯಾತ್ರಿಕ ಮಹೇಶ್ ಮಾತನಾಡಿ, ನಾವು ಬೀದರ್​ನಿಂದ ಭದ್ರಿನಾಥ್​ ದೇವಸ್ಥಾನಕ್ಕೆ ಬಂದಿದ್ದೆವು, ಆದರೆ ಇಲ್ಲಿ ಗುಡ್ಡ ಕುಸಿತ ಉಂಟಾಗಿ ಸುಮಾರು 7ಕಿಮೀ ನಷ್ಟು ರಸ್ತೆ ಸಂಚಾರ ಸ್ಥಗಿತವಾಗಿದೆ. ನಾವು ಹದಿನೈದು ಜನ ಬೀದರ್​ ನಿಂದ ಬಂದಿದ್ದೆವು. ಈಗ ನಾವು ಇಲ್ಲೇ ಸಿಲುಕಿಕೊಂಡಿದ್ದೇವೆ. ಇಲ್ಲಿ ಧಾರಾಕಾರವಾಗಿ ಮಳೆ ಬರುತ್ತಿದೆ, ಹೀಗಾಗಿ ಕೇದಾರನಾಥ್ ಮತ್ತು ಭದ್ರಿನಾಥಕ್ಕೆ ಯಾರು ಈ ಸಮಯದಲ್ಲಿ ಬರಬೇಡಿ ಎಂದು ಮನವಿ ಮಾಡಿದ್ದಾರೆ.

ಮತ್ತೊಂದೆಡೆ, ಜುಲೈ.19ರಂದು ಗುಜರಾತಿನ ವೆರಾವಲ್​ನಲ್ಲಿರುವ ಶ್ರೀ ಸೋಮನಾಥ ದೇವಾಲಯದ ದರ್ಶನಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯ ಜಿಲ್ಲಾಡಳಿತದ ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದೆ. ನಾವು ಸುರಕ್ಷಿತವಾಗಿರುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರು ಮಾಹಿತಿ ನೀಡಿದ್ದರು.

ಇದನ್ನೂ ಓದಿ:Cloud burst: ಮೇಘಸ್ಫೋಟಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ.. ಚರಂಡಿಯಲ್ಲಿ ಸಿಲುಕಿದ ವಾಹನಗಳು

ABOUT THE AUTHOR

...view details