ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಗೆದ್ದ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ - ganesh son vihan
ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಶೋ ಜೊತೆ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಬಳಿಕ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಗಣೇಶ್. ಗೋಲ್ಡನ್ ಸ್ಟಾರ್ ಓರ್ವ ನಟ ಮಾತ್ರವಲ್ಲದೇ ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಶೂಟಿಂಗ್ ಇಲ್ಲದೇ ಇದ್ದ ಸಂದರ್ಭ ಗಣಿ ಮನೆಯಲ್ಲಿ ಮಕ್ಕಳ ಜೊತೆ ಕಾಲ ಕಳೆಯಲು ಇಷ್ಟ ಪಡುತ್ತಾರೆ. ಮಕ್ಕಳ ಬೆಳವಣಿಗೆ ಬಗ್ಗೆ ಸದಾ ಯೋಚನೆ ಮಾಡುವ ಗಣಿ ಇದೀಗ ತಮ್ಮ ಮಗ ವಿಹಾನ್ ಗಣೇಶ್ ಮಾಡಿದ ಸಾಧನೆ ಬಗ್ಗೆ ಹಂಚಿಕೊಂಡಿದ್ದಾರೆ.
ಗಣೇಶ್ ನಟನೆ ಜೊತೆಗೆ ಸೈಕ್ಲಿಂಗ್ ಹಾಗೂ ಕ್ರಿಕೆಟ್ ಆಡುವುದರಲ್ಲಿ ಎತ್ತಿದ ಕೈ. ಮಗ ವಿಹಾನ್ ಕೂಡ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಬಹುಮಾನ ಗೆದ್ದಿದ್ದಾನೆ. ಗಣರಾಜ್ಯೋತ್ಸದ ನಿಮಿತ್ತ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಟ್ಟದ ಜೂನಿಯರ್ ಕರಾಟೆ ಚಾಂಪಿಯನ್ಶಿಪ್ ವಿಹಾನ್ ಭಾಗವಹಿಸಿದ್ದ. ಅಚ್ಚರಿ ಸಂಗತಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ, ಗೋಲ್ಡ್ ಮೆಡಲ್ ಅನ್ನು ಗೆದ್ದು ಬೀಗಿದ್ದಾನೆ. ಈ ವಿಚಾರನ್ನು ಸ್ವತಃ ನಟ ಗಣೇಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಮಗನ ಸಾಧನೆ ಬಗ್ಗೆ ಖುಷಿ ಪಟ್ಟಿದ್ದಾರೆ.
ಇನ್ನೂ ಬಾನ ದಾರಿಯಲ್ಲಿ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾಗಿ ನಟ ಗಣೇಶ್ ಅಭಿನಯಿಸಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಾನ ದಾರಿಯಲ್ಲಿ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿ ಟ್ರೆಂಡಿಂಗ್ನಲ್ಲಿದೆ.
ಇದನ್ನೂ ಓದಿ:'ಇನ್ಮುಂದೆ ನಾವು ಮಿಸ್ಟರ್ & ಮಿಸೆಸ್ ಸಿಂಹ' ಎಂದ ನಟಿ ಹರಿಪ್ರಿಯಾ