ಪೆಟ್ರೋಲ್ ಬಂಕ್ ಒಡೆಯರಾಗಬೇಕಾ... ನಿಮ್ಮ ನೆರವಿಗೆ ಬರಲಿದೆ ಕೇಂದ್ರ ಸರ್ಕಾರ - Petrol Pump
ತೈಲ ರಹಿತ ಕಂಪನಿಗಳು ಸ್ಪರ್ಧೆಯನ್ನು ಹೆಚ್ಚಿಸಲು ಹಾಗೂ ಪೆಟ್ರೋಲ್ ಪಂಪ್‌ಗಳನ್ನು ಸುಲಭವಾಗಿ ಸ್ಥಾಪಿಸಲು ಅನುವು ಮಾಡಿಕೊಡಲು ಕೇಂದ್ರ ಸರ್ಕಾರವು ಮುಂದಾಗಿದೆ. ಇಂಧನ ಚಿಲ್ಲರೆ ಮಾರಾಟದ ಮಾನದಂಡಗಳ ಬದಲಾವಣೆಗೆ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಅನುಮೋದನೆ ನೀಡಿದೆ. ಪ್ರಸ್ತುತ ಭಾರತದಲ್ಲಿ ಇಂಧನ ಚಿಲ್ಲರೆ ವ್ಯಾಪಾರ ಪರವಾನಗಿ ಪಡೆಯಲು ಕಂಪನಿಯು ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಉತ್ಪಾದನೆ, ಸಂಸ್ಕರಣೆ, ಪೈಪ್‌ಲೈನ್‌ಗಳು ಅಥವಾ ದ್ರವೀಕೃತ ನೈಸರ್ಗಿಕ ಅನಿಲ ಟರ್ಮಿನಲ್‌ಗಳಲ್ಲಿ ₹ 2,000 ಕೋಟಿಯಷ್ಟು ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ನೂತನ ನೀತಿಗಳ ಜಾರಿಯಿಂದು ಪೆಟ್ರೋಲ್ ಪಂಪ್ಗಳ ಸ್ಥಾಪನೆ ಸುಲಭವಾಗಲಿದೆ.