ಮಾರುಕಟ್ಟೆ ರೌಂಡಪ್: ಸೆನ್ಸೆಕ್ಸ್ ಸಾರ್ವಕಾಲಿಕ ಜಿಗಿತ, ಚಿನ್ನ, ಬೆಳ್ಳಿ, ಪೆಟ್ರೋಲ್ ದರ ಹೀಗಿದೆ! - ಇಂದಿನ ಚಿನ್ನದ ಬೆಲೆ
ಮುಂಬೈ: ಸತತ ಐದನೇ ದಿನವೂ ಏರಿಕೆ ದಾಖಲಿಸಿದ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್, ಗುರುವಾರದ ವಹಿವಾಟಿನಂದು 224 ಅಂಕ ಏರಿಕೆ ಕಂಡು ಹೊಸ ಉತ್ತುಂಗಕ್ಕೇರಿತು. ತನ್ನ ಜೀವಿತಾವಧಿಯ ಮಧ್ಯಂತರ ಅವಧಿಯ ಗರಿಷ್ಠ 46,992.57 ಅಂಕಗಳ ಮಟ್ಟಕ್ಕೆ ತಲುಪಿ, ದಿನದ ಅಂತ್ಯಕ್ಕೆ 46,890.34 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 58 ಅಂಕ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ 13,773.25 ಅಂಕಗಳ ಮಟ್ಟದ ವಿರಾಮ ನೀಡಿತು.