ಮಾರುಕಟ್ಟೆ ರೌಂಡಪ್: ರಿಲಯನ್ಸ್ ಷೇರು ಖರೀದಿ ಭರಾಟೆಗೆ 86 ಅಂಕ ಜಿಗಿದ ಸೆನ್ಸೆಕ್ಸ್ - ಪೆಟ್ರೋಲ್ ಬೆಲೆ
ರಿಲಯನ್ಸ್ ಇಂಡಸ್ಟ್ರೀಸ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಷೇರು ಮೌಲ್ಯದಲ್ಲಿ ಏರಿಕೆ ದಾಖಲಿಸಿದ್ದು, ತತ್ಪರಿಣಾಮ ಮುಂಬೈ ಸೂಚ್ಯಂಕ ಏರಿಕೆ ಕಂಡಿದೆ. ದಿನದಂತ್ಯದ ವೇಳೆಗೆ ಬಿಎಸ್ಇ 86.47 ಅಂಕ ಏರಿಕೆಯಾಗಿ 38,614.79 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 23.05 ಅಂಕ ಹೆಚ್ಚಳವಾಗಿ 11,408.40 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.