ತನ್ನ ಮರಿಗಳೊಂದಿಗೆ ರಸ್ತೆ ದಾಟಿದ ಹುಲಿರಾಯ.. ವಿಡಿಯೋ ವೈರಲ್ - ಉತ್ತರ ಪ್ರದೇಶದ ಪಿಲಿಭಿತ್ ಟೈಗರ್ ರಿಸರ್ವ್
ಉತ್ತರ ಪ್ರದೇಶದ ಪಿಲಿಭಿತ್ ಟೈಗರ್ ರಿಸರ್ವ್ ನಲ್ಲಿ ಹುಲಿ ತನ್ನ ಮರಿಗಳೊಂದಿಗೆ ರಸ್ತೆ ದಾಟುವ ವಿಡಿಯೋ ಸಖತ್ ವೈರಲ್ ಆಗಿದೆ. ಪಿಲಿಭಿತ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಹುಲಿ ತನ್ನ ಮರಿಗಳೊಂದಿಗೆ ರಸ್ತೆ ದಾಟುವ ದೃಶ್ಯವನ್ನ ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ಸೇರೆ ಹಿಡಿದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.