ಒಡಿಶಾದ ನಂದನ ಕಾನನ ಮೃಗಾಲಯದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ ಮೇಘಾ ಹುಲಿ - Tigress megha gives birth to cubs news
ಭುವನೇಶ್ವರ: ನಂದನ ಕಾನನ ಮೃಗಾಲಯದಲ್ಲಿ ಮೇಘಾ ಎಂಬ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಝೂಲಾಜಿಕಲ್ ಪಾರ್ಕ್‌ನ ಉಪನಿರ್ದೇಶಕ ಬಿಮಲ್ ಪ್ರಸಾದ್ ಆಚಾರ್ಯ, ಜನಪ್ರಿಯ ನಂದಂಕಣನ್ ಮೃಗಾಲಯದಲ್ಲಿ ಒಟ್ಟು ಹುಲಿಗಳ ಸಂಖ್ಯೆ 30ಕ್ಕೆ ತಲುಪಿದೆ. ಇದರಲ್ಲಿ ಏಳು ಬಿಳಿ ಹುಲಿಗಳು, ನಾಲ್ಕು ಮೆಲನಿಸ್ಟಿಕ್ ಹುಲಿಗಳು ಮತ್ತು 13 ರಾಯಲ್ ಬಂಗಾಳ ಹುಲಿಗಳಿವೆ. ಮೇಘಾ ಹುಲಿ ಜನ್ಮ ನೀಡಿದ ಮೂರು ನವಜಾತ ಹುಲಿ ಮರಿಗಳು ಆರೋಗ್ಯವಾಗಿವೆ. ಸುರಕ್ಷತೆಗಾಗಿ ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಹೇಳಿದರು. ಅಧಿಕಾರಿಗಳು ಈ ಪ್ರದೇಶವನ್ನು ನಿರ್ಬಂಧಿಸಿದ್ದಾರೆ ಮತ್ತು ಯಾರಿಗೂ ಅಲ್ಲಿಗೆ ಹೋಗಲು ಅವಕಾಶವಿಲ್ಲ. ಇದಕ್ಕೂ ಮುನ್ನ ಮಾರ್ಚ್‌ನಲ್ಲಿ ನಂದಂಕಣನ್ ಮೃಗಾಲಯದಲ್ಲಿ ಬಿಜಯಾ ಎಂಬ ಬಿಳಿ ಹುಲಿ ಮೂರು ಪುಟ್ಟ ಮರಿಗಳಿಗೆ ಜನ್ಮ ನೀಡಿತ್ತು.
Last Updated : Apr 14, 2021, 5:25 PM IST