ಕೇದಾರ್ ಕಾಂತ ಪರ್ವತದ ಮೇಲೆ ರಾಷ್ಟ್ರೀಯ ಧ್ವಜ ಹಾರಿಸಿದ ಗೌರಿ ಅಜಾರಿಯಾ - Gauri Ajaria hoisted National Flag on Kedar Kantha mountain
ಮಧ್ಯಪ್ರದೇಶ: ಪನ್ನಾ ಜಿಲ್ಲೆಯ ಸಿಮರಿಯಾ ತಹಸಿಲ್‌ನ ರಾಮ್‌ಕುಮಾರ್ ಅರ್ಜಾರಿಯಾ ಅವರ ಪುತ್ರಿ ಗೌರಿ ಅರ್ಜಾರಿಯಾ ಜನವರಿ 26 ರಂದು ಸುಮಾರು ಹನ್ನೆರಡು ಸಾವಿರ ಎತ್ತರದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಅಲ್ಲದೇ ಮೈನಸ್ 20 ಡಿಗ್ರಿ ತಾಪಮಾನದಲ್ಲಿ ರಾಷ್ಟ್ರಗೀತೆಯನ್ನು ಹಾಡಿದ್ದಾರೆ. ಅವರು ಇಂಟರ್ನ್ಯಾಷನಲ್ ಅಡ್ವೆಂಚರ್ ಫೌಂಡೇಶನ್ ಗುಂಪಿನ ಸದಸ್ಯರೊಂದಿಗೆ ಕೇದಾರ ಕಾಂತ ಪರ್ವತಕ್ಕೆ ಹೋಗಿದ್ದರು. ಈ ವೇಳೆ ಪರ್ವತದ 12,500 ಅಡಿ ಎತ್ತರಕ್ಕೆ ಹೋಗಿ ಧ್ವಜ ಹಾರಿಸಿದ್ದಾರೆ.