ಚಲಿಸುತ್ತಿದ್ದ ಬಸ್ನಲ್ಲೇ ಲೈಂಗಿಕ ಕಿರುಕುಳ... ಫೇಸ್ಬುಕ್ನಲ್ಲಿ ಕೆಟ್ಟ ಅನುಭವ ಹಂಚಿಕೊಂಡ ಯುವತಿ!
ಮಲ್ಲಾಪುರಂ: ಕೇರಳದ ಕಾಸರಗೋಡುಗೆ ತೆರಳುತ್ತಿದ್ದ ವೇಳೆ ಬಸ್ನಲ್ಲಿ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಇದೀಗ ಪೊಲೀಸರು ಕಸಗೋಡೆ ಕುಡ್ಲು ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ತಡರಾತ್ರಿ ಮೂರು ಗಂಟೆ ಸುಮಾರಿಗೆ ಮುನವೀರ್ ಎಂಬ ವ್ಯಕ್ತಿ ಬಸ್ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು, ತನಗೆ ಆಗಿರುವ ಕೆಟ್ಟ ಅನುಭವದ ಬಗ್ಗೆ ಯುವತಿ ಫೇಸ್ಬುಕ್ನಲ್ಲಿ ವಿವರಿಸಿದ್ದಾಳೆ.