ಕರ್ನಾಟಕ

karnataka

ETV Bharat / videos

ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ: ನಡುರಸ್ತೆಯಲ್ಲೇ ಪುಂಡನ ಚಳಿ ಬಿಡಿಸಿದ ಲೇಡಿ ಸಿಂಗಂ​​

By

Published : Dec 10, 2019, 6:30 PM IST

ಕಾನ್ಪುರ (ಉತ್ತರ ಪ್ರದೇಶ): ಶಾಲೆಯೊಂದರ ಬಳಿ ನಿಂತು ಹುಡುಗಿಯರನ್ನು ಚುಡಾಯಿಸುತ್ತ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನೋರ್ವನಿಗೆ ಮಹಿಳಾ ಪೇದೆವೋರ್ವರು ತಮ್ಮ ಕಾಲಲಿದ್ದ ಬೂಟ್​ ತೆಗೆದು ರಸ್ತೆ ಮಧ್ಯದಲ್ಲೇ ಗೂಸಾ ನೀಡಿರುವ ಪ್ರಕರಣ ಕಾನ್ಪುರದಲ್ಲಿ ನಡೆದಿದೆ. ಕೇವಲ 33 ಸೆಕೆಂಡ್​ಗಳಲ್ಲಿ 22 ಬಾರಿ ಯುವಕ ಬೂಟೇಟು ತಿಂದಿದ್ದಾನೆ. ಮಹಿಳಾ ಕಾನ್‌ಸ್ಟೇಬಲ್‌ ಧೈರ್ಯಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರೇಮ್ ಪ್ರಕಾಶ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಐಪಿಸಿಯ ಸೆಕ್ಷನ್ 294 ರ ಅಡಿಯಲ್ಲಿ ಬಿಥೂರ್ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details